ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (KSDL) ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಸಿರಿಯೂರ್ ಅವರು ತಮ್ಮ ಬಾಡಿಗೆ ಮನೆಯಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣ ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಖಿನ್ನತೆಗೆ ಒಳಗಾಗಿರುವ ಶಂಕೆ
ಅಮೃತ್ ಸಿರಿಯೂರ್, 28ನೇ ತಾರೀಖು ಸಂಜೆ 5.30 ಗಂಟೆ ಸುಮಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ತೀವ್ರ ಖಿನ್ನತೆಗೆ ಒಳಗಾಗಿದ್ದ ಶಂಕೆ ವ್ಯಕ್ತವಾಗಿದೆ. 2019ರಲ್ಲಿ ಎರಡನೇ ಮದುವೆಯಾಗಿದ್ದ ಅವರು, ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಒತ್ತಡದಿಂದ ಬಳಲುತ್ತಿದ್ದರೆಂಬ ಸುದ್ದಿ ಬಂದಿದೆ.
ಕೆಲಸದ ಒತ್ತಡ ಮತ್ತು ಕಿರುಕುಳದ ಆರೋಪ
ಅಮೃತ್ ಸಿರಿಯೂರ್ ಬರೆದ ಡೆತ್ ನೋಟ್‌ನಲ್ಲಿ, ಕೆಲಸದ ಸಂಬಂಧ ಹಿರಿಯ ಅಧಿಕಾರಿಗಳ ಕಿರುಕುಳ ಮತ್ತು ಒತ್ತಡವನ್ನು ಉಲ್ಲೇಖಿಸಿದ್ದಾರೆ. ಅವರೇ ಬರೆದ ಪತ್ರದಲ್ಲಿ “ತಂದೆಗೆ ಒಳ್ಳೆಯ ಮಗನಾಗಲಿಲ್ಲ, ಹೆಂಡತಿಗೆ ಒಳ್ಳೆಯ ಗಂಡನಾಗಲಿಲ್ಲ” ಎಂಬ ಶೋಕಭರಿತ ಉಲ್ಲೇಖವಿದೆ.
ಮರಣೋತ್ತರ ತನಿಖೆ ಪ್ರಗತಿಯಲ್ಲಿದೆ
ಮಾಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳದಿಂದ ಸಿಕ್ಕ ಡೆತ್ ನೋಟ್‌ನಲ್ಲಿ ಕೆಲ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ, ಆದರೆ ಯಾವುದೇ ಹಿರಿಯ ಅಧಿಕಾರಿಯ ಹೆಸರು ನಮೂದಿಸಿಲ್ಲ. ಪೊಲೀಸರು ಘಟನೆ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇದನ್ನು ಓದಿ -ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಸಮಸ್ಯೆ
ಅಮೃತ್ ಸಿರಿಯೂರ್, 10 ವರ್ಷಗಳಿಂದ ಕೆಎಸ್‌ಡಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದು, ವೈಯಕ್ತಿಕ ಜೀವನದಲ್ಲೂ ತೊಂದರೆ ಅನುಭವಿಸುತ್ತಿದ್ದರು. ಅವರ ಎರಡನೇ ಮದುವೆಯೂ ವಿಚ್ಛೇದನ ಪ್ರಕ್ರಿಯೆಯಲ್ಲಿ ಮುಂದುವರಿಯುತ್ತಿದ್ದು, ಅವರು ಬಾಡಿಗೆ ಮನೆಯಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದರು.
More Stories
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ