ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಶಾಸಕ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ನಾಳೆ ಬೆಳಿಗ್ಗೆ ಕೆಆರ್ ಎಸ್ ಡ್ಯಾಂ ಗೆ ಬನ್ನಿ, ನಾವು ಎಲ್ಲಾ ಶಾಸಕರು ಬರ್ತೀವಿ.
ಬಿರುಕು ಬಿಟ್ಟಿದ್ರೆ ಸಾಮೂಹಿಕ ರಾಜೀನಾಮೆ ಕೊಟ್ಟು ನಿಮ್ಮ ಬೆಂಬಲಕ್ಕೆ ನಿಂತುಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ರವೀಂದ್ರ , ಸಂಸದರು ತಮ್ಮ ಬೇಜವಾಬ್ದಾರಿ ಹೇಳಿಕೆ ಹಾಗೂ ನಡುವಳಿಕೆ ಮುಚ್ಚಿ ಹಾಕಲು ಈ ರೀತಿ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಮೂದಲಿಸಿದರು.
ಡ್ಯಾಂ ನಮ್ಮ ಜೀವನಾಡಿ. ಅದಕ್ಕಿಂತ ಇನ್ನೊಂದು ಮುಖ್ಯ ವಿಚಾರ.
ಕೂತಿದ್ದ ಕಡೆ, ನಿಂತಿದ್ದ ಕಡೆ ಡ್ಯಾಂ ಬಿರುಕು ಬಿಟ್ಟಿದೆ, ಒಡೆದು ಹೋಗಿದೆ ಅಂತ ಹೇಳೋದು ಸತ್ಯವಾಗಲೂ ಸರಿ ಕಾಣಲ್ಲ. ಜನ ನಿಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಇಂತಹ ಕ್ಷುಲ್ಲಕ ಹೇಳಿಕೆ ಕೊಡುವುದು ಬೇಡ ಎಂದು ಸಲಹೆ ನೀಡಿದರು.
ನೀವು ಅಪರೂಪಕ್ಕೆ ಮಂಡ್ಯಕ್ಕೆ ಬಂದು ಹೋಗ್ತೀರಿ. ನಮಗೆ ದಿನ ಬೆಳಿಗ್ಗೆ ರೈತರ ಜೊತೆ ಒಡನಾಟ ಇದೆ. ಕೆ ಆರ್ ಎಸ್ ಬಗ್ಗೆ ನಿಮಗಿಂತ ಜವಾಬ್ದಾರಿ ನಮಗಿದೆ.
ನಾಳೆ ಬೆಳಿಗ್ಗೆಯೇ ಕೆ ಆರ್ ಎಸ್ ಗೆ ಬನ್ನಿ, ನಾವು ಬರ್ತೀವಿ. ಎಲ್ಲಿ ಬಿರುಕು ಬಿಟ್ಟಿದೆ ಎಂಬುದನ್ನು ನೀವು ತೋರಿಸಿದರೆ , ಸಿಎಂ, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ರಾಜೀನಾಮೆ ನೀಡ್ತೀವಿ ಎಂದು ಸವಾಲು ಎಸೆದರು.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ