filmy

ನಟ ಪ್ರಭಾಸ್ ದೊಡ್ಡಪ್ಪ, ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಕೃಷ್ಣಂರಾಜು ನಿಧನ

ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಟ ಪ್ರಭಾಸ್ ದೊಡ್ಡಪ್ಪ, ಟಾಲಿವುಡ್​ ರೆಬೆಲ್​ ಸ್ಟಾರ್ ಕೃಷ್ಣಂರಾಜು ಹೈದರಾಬಾದ್​ನಲ್ಲಿ ಭಾನುವಾರ ಬೆಳಗಿನ ಜಾವ ನಿಧನರಾದರು.

ನಟ ಕೃಷ್ಣಂರಾಜು (83)ಅವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.1940 ಜನವರಿ 20 ರಂದು ಜನಿಸಿದ್ದ ಕೃಷ್ಣಂರಾಜು ತೆಲುಗಿನ 187 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯದಿಂದ ಬಳುತ್ತಿದ್ದ ಅವರು ಕೆಲ ಸಮಯದಿಂದ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಮವಾರ ಹೈದರಾಬಾದ್​​ನಲ್ಲಿ ಅವರ ಅಂತ್ಯ ಕ್ರಿಯೆ ನಡೆಯಲಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು ಅವರು ಕೊನೆಯದಾಗಿ ಪ್ರಭಾಸ್ ಅವರ ‘ರಾಧೆ ಶ್ಯಾಮ್’​ ಸಿನಿಮಾದಲ್ಲಿ ನಟಿಸಿದ್ದರು. ರಾಜಕೀಯದಲ್ಲೂ ಸಕ್ರೀಯರಾಗಿದ್ದ ಕೃಷ್ಣಂರಾಜು ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಪ್ರಜಾರಾಜ್ಯಂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024