January 16, 2025

Newsnap Kannada

The World at your finger tips!

canal

ಕೆ ಆರ್ ಪೇಟೆ: ನಾಲೆ ನೀರಿನಲ್ಲಿ ಈಜಲು ಹೋಗಿ ಮೈಸೂರಿನ ಮೂವರು ಯುವಕರು ಜಲ ಸಮಾಧಿ

Spread the love

ಈಜಲು ಹೋಗಿದ್ದ ಮೈಸೂರಿನ ಮೂವರು ಯುವಕರು ಜಲ ಸಮಾಧಿಯಾದ ಘಟನೆ
ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಬಳಿ ಹೇಮಾವತಿ ಜಲಾಶಯದ ಮಂದಗೆರೆ ಎಡದಂಡೆ ನಾಲೆಯಲ್ಲಿ ಕಳೆದ ಸಂಜೆ ಜರುಗಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದ ಸಮೀಪದಲ್ಲಿರುವ ಶಕ್ತಿದೇವತೆ ಶ್ರೀ ಚಂದಗೋಳಮ್ಮನವರ ಕ್ಷೇತ್ರಕ್ಕೆ ಪರುವಿಗೆ ಬಂದಿದ್ದ 8 ಯುವಕರ ಪೈಕಿ ಮೂವರು ಯುವಕರು ಮಂದಗೆರೆ ಎಡದಂಡೆ ನಾಲೆಯಲ್ಲಿ ಈಜಲು ಹೋಗಿ ಜಲಸಮಾಧಿಯಾಗಿದ್ದಾರೆ.

ಶವಗಳ ಪತ್ತೆಗೆ ಅಗ್ನಿಶಾಮಕ ಸಿಬ್ಬಂಧಿಗಳ ನೇತೃತ್ವದಲ್ಲಿ ನಡೆದ ಶೋಧಕಾರ್ಯ ನಿನ್ನೆ ರಾತ್ರಿ ಹಾಗೂ ಈ ಬೆಳಿಗ್ಗೆಯೂ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲಿನ ಸಿದ್ಧರಾಜು ಪುತ್ರ ಮಂಜು(20), ಆಟೋ ಚಾಲಕ ಮೊಗರಹಳ್ಳಿ ಮಂಟಿಯ ನಿವಾಸಿ ರವಿ(27) ಮತ್ತು ಲೋಕನಾಯಕ ನಗರದ ರವಿ(22) ಸಾವನ್ನಪ್ಪಿದವರು.

ಮೃತದೇಹಗಳ ಪತ್ತೆಗೆ ಸಹಾಯಕವಾಗಲೆಂದು ನಾಲೆಯಲ್ಲಿ ನೀರು ಹರಿಯುವುದನ್ನು ಬಂದ್ ಮಾಡಲಾಗಿದೆ ಎಂದು ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಮೃತ ಯುವಕರ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿದೆ.‌.

Copyright © All rights reserved Newsnap | Newsever by AF themes.
error: Content is protected !!