ಕೆಪಿಎಸ್ಸಿಯ ಪ್ರಥಮ ದರ್ಜೆ ಗುಮಾಸ್ತ (ಎಫ್ ಡಿಎ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆದ ನಂತರ ಮುಂದೂಡಲಾಗಿದ್ದ ಪರೀಕ್ಷೆಯನ್ನು ಫೆಬ್ರವರಿ 28ಕ್ಕೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿದೆ.
ಈ ಕುರಿತಂತೆ ಕೆಪಿಎಸ್ ಸಿ ಕಾರ್ಯದರ್ಶಿ ಜಿ.ಸತ್ಯವತಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಜನವರಿ 24 ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆ ಆ ದಿನದ ಪರೀಕ್ಷೆ ಯನ್ನು ಮುಂದೂಡಲಾಗಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ಆ ಮಾಹಿತಿಯನ್ನು ಕೆಪಿಎಸ್ಸಿಗೆ ತಿಳಿಸಿ,
ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಖಾಲಿ ಇರುವ 1,114 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ 3.74 ಲಕ್ಷ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ.
More Stories
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ