ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಅರ್ಜಿಯ ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ: 03-01-2025
- ಅರ್ಜಿಯನ್ನು ಸಲ್ಲಿಸಲು ಕೊನೆ ದಿನಾಂಕ: 01-02-2025
ಹುದ್ದೆಗಳ ವಿವರ:
- ಸಂಸ್ಥೆ: ಕರ್ನಾಟಕ ರಾಜ್ಯ ಕೃಷಿ ಇಲಾಖೆ
- ಹುದ್ದೆಯ ಹೆಸರು: ಸಹಾಯಕ ಕೃಷಿ ಅಧಿಕಾರಿ
- ಹುದ್ದೆಗಳ ಸಂಖ್ಯೆ: 945
- ಅರ್ಹತೆ: B.Sc ಅಥವಾ B.Tech (ಕೃಷಿ)
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc (ಅಗ್ರಿಕಲ್ಚರ್), B.Sc (ಆನರ್ಸ್) ಅಗ್ರಿಕಲ್ಚರ್ ಅಥವಾ B.Tech (ಕೃಷಿ) ಪೂರೈಸಿರಬೇಕು.
ಹೆಚ್ಚುವರಿ ಅರ್ಹತೆ: - 15% ಹುದ್ದೆಗಳಿಗೆ (141/142 ಹುದ್ದೆಗಳು) ಈ ಕೆಳಗಿನ ಅರ್ಹತೆಗಳಲ್ಲಿ ಒಂದನ್ನು ಹೊಂದಿರಬೇಕು:
- B.Tech – ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ
- B.Sc – ಕೃಷಿ ಮಾರುಕಟ್ಟೆ ಮತ್ತು ಸಹಕಾರ
- B.Tech – ಕೃಷಿ ಎಂಜಿನಿಯರಿಂಗ್
- B.Sc – ಕೃಷಿ ಜೈವಿಕ ತಂತ್ರಜ್ಞಾನ
- B.Sc (ಆನರ್ಸ್) – ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್
ವಯೋಮಿತಿ:
- ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಸೆಪ್ಟೆಂಬರ್ 10, 2024ರ ಆಧಾರದ ಮೇಲೆ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಯಾಗಿದೆ:
- ಸಾಮಾನ್ಯ ವರ್ಗ: 38 ವರ್ಷ
- 2ಎ, 2ಬಿ, 3ಎ ಅಥವಾ 3ಬಿ: 41 ವರ್ಷ
- ಎಸ್ಸಿ/ಎಸ್ಟಿ/ಪ್ರವರ್ಗ-1: 43 ವರ್ಷ
ಪರೀಕ್ಷೆಯ ವಿವರ:
- ಭಾಷಾ ಪರೀಕ್ಷೆ
- ಮೋಡ್: ಆಫ್‌ಲೈನ್
- ಅವಧಿ: 1.5 ಗಂಟೆ
- ಅಂಕಗಳು: 150
ಲಿಖಿತ ಪರೀಕ್ಷೆ:
- ಪೇಪರ್ I: 300 ಪ್ರಶ್ನೆಗಳು, 300 ಅಂಕಗಳು, ಅವಧಿ 1.5 ಗಂಟೆ
- ಪೇಪರ್ II: 300 ಪ್ರಶ್ನೆಗಳು, 300 ಅಂಕಗಳು, ಅವಧಿ 2 ಗಂಟೆ
- ಪ್ರಶ್ನೆಗಳ ಪ್ರಕಾರ: MCQ (ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ)
- ಮಾರ್ಕಿಂಗ್ ಪದ್ದತಿ: ಸರಿಯಾದ ಉತ್ತರಕ್ಕೆ 1 ಅಂಕ, ತಪ್ಪು ಉತ್ತರಕ್ಕೆ -1/4 ಅಂಕ ಕಡಿತ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೊದಲಿಗೆ ಭಾಷಾ ಪರೀಕ್ಷೆಗೆ ಕರೆಯಲಾಗುತ್ತದೆ, ನಂತರ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.ಇದನ್ನು ಓದಿ –1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
ಹೆಚ್ಚಿನ ಮಾಹಿತಿಗಾಗಿ:
- ಅಧಿಕೃತ ನೋಟಿಫಿಕೇಶನ್ಗೆ ಭೇಟಿ ನೀಡಲು: KPSC ವೆಬ್ಸೈಟ್ https://www.kpsc.kar.nic.in/notification.html
- ಅರ್ಜಿಗಳನ್ನು ಸಲ್ಲಿಸಲು: KPSC Online https://kpsconline.karnataka.gov.in/HomePage/index.html
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ