ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಕಳೆದ ಮಾರ್ಚನಿಂದ ಇಲ್ಲಿಯವರೆಗೂ ಸುಮಾರು 5
ಕೋಟಿ ರು ಸಂಗ್ರಹದಲ್ಲಿ ಇಳಿಕೆಯಾಗಿದೆ.
ಕಳೆದ ಬಾರಿಗಿಂತ ಈ ಬಾರಿ 41,57, 204 ರು. ಆದಾಯ ಕುಗ್ಗಿ ಹೋಗಿದೆ.2020 ಜನವರಿಯಲ್ಲಿ 1 ಕೋಟಿ 10 ಲಕ್ಷ 82 ಸಾವಿರ 204 ರು ಸಂಗ್ರಹವಾಗಿತ್ತು. ಆದರೆ ಕೊರೋನಾ
ಎಫೆಕ್ಟ್ ನಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಈ ಬಾರಿ ಹುಂಡಿಯಲ್ಲಿ 11,500 ರುಗಳಲ್ಲಿ ನಿಷೇಧಿತ ನೋಟುಗಳು ಸಿಕ್ಕಿವೆ. ಕಳೆದ ಬಾರಿ 80,500 ರುಗಳು ನಿಷೇಧಿತ ನೋಟುಗಳು
ಸಿಕ್ಕಿದ್ದವು. ಅಲ್ಲದೇ 7 ವಿದೇಶಿ ಕರೆನ್ಸಿ ನೋಟುಗಳು ಲಭ್ಯವಾಗಿವೆ ಎಂದು ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.
More Stories
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ