ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ರಾತ್ರಿ 11.50 ರ ಸುಮಾರಿಗೆ ನಡೆದಿದೆ.
ಘಟನೆಯಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಶಾಸಕರ ಆಪ್ತ ಸಹಾಯಕ ಹೊಂಗನೂರು ಚೇತನ್ ಮತ್ತು ವಾಹನ ಚಾಲಕ ಸತೀಶ್ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕೊಳ್ಳೇಗಾಲದಿಂದ ಶಾಸಕರು ಮೈಸೂರಿನತ್ತ ತೆರಳುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಹಳ್ಳಕೆ ಇಳಿದು ನಿಂತಿದೆ. ಯಾವುದೇ ಬೇರೆ ವಾಹನಗಳು ಆ ವೇಳೆ ಇಲ್ಲದಿರುವುದು ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದೇವೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಯಾರಿಗೂ ಯಾವ ಅಪಾಯವೂ ಆಗಿಲ್ಲ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಚೇತನ್ ತಿಳಿಸಿದ್ದಾರೆ.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ