ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರನ್ನ ಕೊಕೇನ್ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಮೇಲಾ, 100 ಗ್ರಾಂ ಕೊಕೇನ್ ಪರ್ಸ್ ನಲ್ಲಿಸಿ ಕಾರಿನೊಳಗೆ ಇರಿಸಿದ್ದರು ಎಂದು ವರದಿಯಾಗಿದೆ.
ನ್ಯೂ ಅಲಿಪೋರಾದಲ್ಲಿ ಪಮೇಲಾ ಬಂಧನವಾಗಿದೆ. ಕಾರಿನಲ್ಲಿ ಇವರ ಜೊತೆಯಲ್ಲಿದ್ದ ಪ್ರಬೀರ್ ಕುಮಾರ್ ದೇ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪಮೇಲಾ ಮತ್ತು ಪ್ರಬೀರ್ ಜೊತೆಯಾಗಿ ಎನ್.ಆರ್.ಅವೆನ್ಯೂನಲ್ಲಿರುವ ಕೆಫೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಪೊಲೀಸರು ಕಾರ್ ತಪಾಸಣೆ ನಡೆಸಿದಾಗ ಸೀಟಿನಡಿ ಪರ್ಸ್ ನಲ್ಲಿ 100 ಗ್ರಾಂ ಕೊಕೇನ್ ಲಭ್ಯವಾಗಿದೆ.
ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಕೊಕೇನ್ ಇರಿಸಿರುವ ಸಾಧ್ಯತೆಗಳಿವೆ ಎಂದು ಬಿಜೆಪಿ ವಕ್ತಾರ ಸಮೀಕ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರ ಅಸಲಿ ಮುಖ ಜನರ ಮುಂದೆ ಬರುತ್ತಿದೆ. ಈ ರೀತಿಯ ಘಟನೆ ಪಶ್ವಿಮ ಬಂಗಾಳಕ್ಕೆ ಅವಮಾನಕರ. ಈ ಹಿಂದೆ ಬಿಜೆಪಿ ನಾಯಕರ ಮಕ್ಕಳು ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ಟಿಎಂಸಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಆರೋಪಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ