January 15, 2025

Newsnap Kannada

The World at your finger tips!

india vs pak

ಕೊಹ್ಲಿ, ಸೂರ್ಯಕುಮಾರ್ ಯಾದವ್ ಅರ್ಧಶತಕ; ಹಾಂಗ್ ಕಾಂಗ್ ಮಣಿಸಿದ ಭಾರತ ಸೂಪರ್ -4 ಗೆ ಪ್ರವೇಶ

Spread the love

ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಗ್ ಕಾಂಗ್ ತಂಡವನ್ನು 40 ರನ್ ಗಳಿಂದ ಸೋಲಿಸಿ ಎ ಗುಂಪಿನಿಂದ ಭಾರತ ಸೂಪರ್ -4 ಹಂತ ತಲುಪಿದೆ

ಹಾಂಗ್ ಕಾಂಗ್ ಗೆಲ್ಲಲು 193 ರನ್ ಗಳ ಬೃಹತ್ ಗುರಿಯನ್ನು ಭಾರತ ನೀಡಿತು. ಹಾಂಕ್ ಕಾಂಗ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ನು ಗಳಿಸಿ ಗೌರವಯುತ ಸೋಲು ಕಂಡರು

192 ರನ್ ಬೃಹತ್ ಮೊತ್ತ ಗಳಿಕೆ :

ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಕಳುಹಿಸಿದ ಹಾಂಗ್ ಕಾಂಗ್ ನಾಯಕ ನಿಜಾಕತ್ ಖಾನ್ ಲೆಕ್ಕಾಚಾರವನ್ನು ಅಕ್ಷರಶಃ ಭಾರತೀಯ ಬ್ಯಾಟರ್ ಗಳು ಉಲ್ಟಾ ಮಾಡಿದರು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 38 ರನ್ ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 21 ರನ್ ಗಳಿಸಿದ್ದ ರೋಹಿತ್ ಶರ್ಮಾ ಆಯುಶ್ ಶುಕ್ಲಾ ಬೌಲಿಂಗ್ ನಲ್ಲಿ ಔಟಾದರು.

ಬಳಿಕ ರಾಹುಲ್ ಜೊತೆಗೂಡಿದ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ನೀಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

Copyright © All rights reserved Newsnap | Newsever by AF themes.
error: Content is protected !!