Trending

ಕೊಹ್ಲಿಯ ಅಬ್ಬರಕ್ಕೆ ನಡುಗಿದ ಸಿಎಸ್‌ಕೆ

ಐಪಿಎಲ್ 20-20ಯ 24 ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 37 ರನ್‌ಗಳ ವಿಜಯ ಸಾಧಿಸಿತು.

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌‌ಸಿಬಿ ಪ್ರಾರಂಭ ಉತ್ತಮವಾಗಿರಲಿಲ್ಲ. ಆರ್‌‌ಸಿಬಿ ತಂಡದ ಆರಂಭಿಕ ಆಟಗಾರರಾಗಿ ದೇವದತ್ ಪಡಿಕ್ಕಲ್ ಹಾಗೂ ಎ. ಫಿಂಚ್ ಮೈದಾನಕ್ಕಿಳಿದರು. ಫಿಂಚ್ ಕೇವಲ 2 ರನ್‌ಗಳಿಗೇ ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು‌. ಫಿಂಚ್ ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಅಬ್ಬರದ ಆಟವನ್ನು ಆಡಿದರು. ಪ್ರಾರಂಭದಲ್ಲಿ ಪಡಿಕ್ಕಲ್ ಅವರಿಗೆ ಉತ್ತಮ ಜೊತೆಯನ್ನೂ ನೀಡಿದರು. ಕೊಹ್ಲಿ 52 ಬಾಲ್‌ಗಳಿಗೆ 90 ರನ್ ಗಳಿಸಿದರೆ, ಪಡಿಕ್ಕಲ್ 34 ಬಾಲ್‌ಗಳಿಗೆ 33 ರನ್ ಗಳಿಸಿದರು. ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.

source – Instagram
credits – iplt20

ಇತ್ತ ಆಟವನ್ನು ಆರಂಭ ಮಾಡಿದ ಸಿಎಸ್‌ಕೆಯ ಆರಂಭಿಕ ಆಟಗಾರರಾದ ವ್ಯಾಟ್ಸನ್ (14) ಫಾಫ್ ಡು ಪ್ಲೆಸ್ಸಿಸ್ (8) ಅಧಿಕ ಬಾಲ್‌ಗಳನ್ನು ತಿಂದು ಕಡಿಮೆ ರನ್‌ಗಳನ್ನು ನೀಡಿ ಔಟಾದರು. ನಂತರ ಬಂದ ಅಂಬಾಟಿ ರಾಯುಡು 40 ಬಾಲ್‌ಗಳಿಗೆ 42 ರನ್, ಹಾಗೂ ಜಗದೀಶನ್ 28 ಬಾಲ್‌ಗಳಿಗೆ 33 ರನ್ ಗಳಿಸಿ ತಂಡವನ್ನು ಮುನ್ನಡೆಸಲು ಪ್ರಯತ್ನ ಪಟ್ಟರು. ಆದರೆ ಸಿ. ಮೋರಿಸ್ (3 ವಿಕೆಟ್) ಹಾಗೂ ಡಬ್ಲ್ಯೂ. ಸುಂದರ್ (2 ವಿಕೆಟ್) ಅವರ ಬೌಲಿಂಗ್ ಸಿಎಸ್‌ಕೆಯನ್ನು ಅಲುಗಾಡದಂತೆ ಮಾಡಿತ್ತು. ಸಿಎಸ್‌ಕೆ ತಂಡ 20 ಓವರ್‌ಗಳಲ್ಲಿ 18 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಪಂದ್ಯದಲ್ಲಿ ಮತ್ತೆ ಸೋಲಿನ ರುಚಿಯನ್ನು ಅನುಭವಿಸಿತು.

Team Newsnap
Leave a Comment
Share
Published by
Team Newsnap

Recent Posts

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More

May 8, 2024

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024