ಐಪಿಎಲ್ 20-20ಯ 24 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 37 ರನ್‌ಗಳ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಪ್ರಾರಂಭ ಉತ್ತಮವಾಗಿರಲಿಲ್ಲ. ಆರ್‌ಸಿಬಿ ತಂಡದ ಆರಂಭಿಕ ಆಟಗಾರರಾಗಿ ದೇವದತ್ ಪಡಿಕ್ಕಲ್ ಹಾಗೂ ಎ. ಫಿಂಚ್ ಮೈದಾನಕ್ಕಿಳಿದರು. ಫಿಂಚ್ ಕೇವಲ 2 ರನ್‌ಗಳಿಗೇ ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಫಿಂಚ್ ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಅಬ್ಬರದ ಆಟವನ್ನು ಆಡಿದರು. ಪ್ರಾರಂಭದಲ್ಲಿ ಪಡಿಕ್ಕಲ್ ಅವರಿಗೆ ಉತ್ತಮ ಜೊತೆಯನ್ನೂ ನೀಡಿದರು. ಕೊಹ್ಲಿ 52 ಬಾಲ್‌ಗಳಿಗೆ 90 ರನ್ ಗಳಿಸಿದರೆ, ಪಡಿಕ್ಕಲ್ 34 ಬಾಲ್‌ಗಳಿಗೆ 33 ರನ್ ಗಳಿಸಿದರು. ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಇತ್ತ ಆಟವನ್ನು ಆರಂಭ ಮಾಡಿದ ಸಿಎಸ್‌ಕೆಯ ಆರಂಭಿಕ ಆಟಗಾರರಾದ ವ್ಯಾಟ್ಸನ್ (14) ಫಾಫ್ ಡು ಪ್ಲೆಸ್ಸಿಸ್ (8) ಅಧಿಕ ಬಾಲ್‌ಗಳನ್ನು ತಿಂದು ಕಡಿಮೆ ರನ್‌ಗಳನ್ನು ನೀಡಿ ಔಟಾದರು. ನಂತರ ಬಂದ ಅಂಬಾಟಿ ರಾಯುಡು 40 ಬಾಲ್‌ಗಳಿಗೆ 42 ರನ್, ಹಾಗೂ ಜಗದೀಶನ್ 28 ಬಾಲ್‌ಗಳಿಗೆ 33 ರನ್ ಗಳಿಸಿ ತಂಡವನ್ನು ಮುನ್ನಡೆಸಲು ಪ್ರಯತ್ನ ಪಟ್ಟರು. ಆದರೆ ಸಿ. ಮೋರಿಸ್ (3 ವಿಕೆಟ್) ಹಾಗೂ ಡಬ್ಲ್ಯೂ. ಸುಂದರ್ (2 ವಿಕೆಟ್) ಅವರ ಬೌಲಿಂಗ್ ಸಿಎಸ್‌ಕೆಯನ್ನು ಅಲುಗಾಡದಂತೆ ಮಾಡಿತ್ತು. ಸಿಎಸ್‌ಕೆ ತಂಡ 20 ಓವರ್‌ಗಳಲ್ಲಿ 18 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಪಂದ್ಯದಲ್ಲಿ ಮತ್ತೆ ಸೋಲಿನ ರುಚಿಯನ್ನು ಅನುಭವಿಸಿತು.
More Stories
2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ