ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಬಿಡುವು ಪಡೆದಿರುವ ರಾಹುಲ್ ತಮ್ಮ ಮದುವೆ ತಯಾರಿಯಲ್ಲಿದ್ದಾರೆ.ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕಡಿತ ಮಾಡಿದ ಕೇಂದ್ರ
ಈಗಾಗಲೇ ನಟಿ ಆಥಿಯಾ ಶೆಟ್ಟಿ ( Atiya Shetty )ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ರಾಹುಲ್ ಇಂದು ಮೈಸೂರಿಗೆ ( Mysore ) ಆಗಮಿಸಿ ತಾಯಿ ಚಾಮುಂಡಿ ದೇವಿ ( Chamundi Devi ) ದರ್ಶನ ಪಡೆದರು
ಸದ್ಯ ಈ ತಿಂಗಳಾಂತ್ಯದಲ್ಲಿ ರಾಹುಲ್, ಆಥಿಯಾ ಶೆಟ್ಟಿ ಜೋಡಿ ಸಪ್ತಪದಿ ತುಳಿಯಲಿದೆ ಎಂದು ಆಪ್ತ ಮೂಲಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ರಾಹುಲ್ ಕರ್ನಾಟಕದ ( Karnataka ) ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಸದ್ಯ ಬಿಡುವಿನಲ್ಲಿರುವ ರಾಹುಲ್ ಶ್ರೀಲಂಕಾ ವಿರುದ್ಧದ ಏಕದಿನ ತಂಡಕ್ಕೆ ಆಯ್ಕೆಗೊಂಡಿದ್ದು, ಜ.10 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಜ.10, 12 ಮತ್ತು 15 ರಂದು ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಯಲ್ಲಿ ರಾಹುಲ್ ಆಡಲಿದ್ದಾರೆ. ಆ ಬಳಿಕ ಮದುವೆ ನಡೆಯುವ ಸಾಧ್ಯತೆ ಇದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು