ಐಪಿಎಲ್ 20-20ಯ 34ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ವಿರುದ್ಧ ಜಯಭೇರಿ ಮೊಳಗಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದ ಬ್ಯಾಟ್ಸ್‌ಮನ್‌ಗಳಾದ ಎಸ್. ಗಿಲ್ ಹಾಗೂ ಆರ್. ತ್ರಿಪಾಠಿ ಆಟ ಪ್ರಾರಂಭಿಸಿದರು. ಗಿಲ್ ಅವರು 37 ಬಾಲ್‌ಗಳಿಗೆ 36 ರನ್ ಗಳಿಸಿದರೆ, ತ್ರಿಪಾಠಿ 16 ಬಾಲ್‌ಗಳಿಗೆ 23 ರನ್ ಗಳಿಸುವ ಮೂಲಕ ಆಟವನ್ನು ಸಾಧಾರಣವಾಗಿಯೇ ಆರಂಭಿಸಿದರು. ಆದರೆ ತದನಂತರ ಬಂದ ಮಾರ್ಗನ್ ಮತ್ತು ಕಾರ್ತಿಕ್, ರಾಣಾ ಅವರು ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾರ್ಗನ್ 23 ಬಾಲ್‌ಗಳಿಗೆ 34 ರನ್ ಗಳಿಸಿದರೆ, ರಾಣಾ 20 ಬಾಲ್‌ಗಳಿಗೆ 29 ರನ್ ಹಾಗೂ ಕಾರ್ತಿಕ್ 14 ಬಾಲ್‌ಗಳಿಗೆ 29 ರನ್ ಗಳಿಕೆ ಮಾಡಿದರು. ಕೆಕೆಆರ್ 20 ಓವರ್‌ಗಳಲ್ಲಿ ತಂಡ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಕೆ ಮಾಡಿತು.
ಎಸ್‌ಆರ್‌ಹೆಚ್, ಕೆಕೆಆರ್ ತಂಡದ ಸವಾಲನ್ನು ಗೆಲ್ಲುವಲ್ಲಿ ವಿಫಲವಾಯಿತು. ಎಸ್‌ಆರ್‌ಹೆಚ್ ತಂಡದಿಂದ ಜೆ. ಬೇರ್ಸ್ಟೋವ್ ಹಾಗೂ ಕೆ. ವಿಲಿಯಮ್ಸನ್ ಅವರು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕಿಳಿದರು. ಬೇರ್ಸ್ಟೋವ್ 28 ಬಾಲ್‌ಗಳಿಗೆ 36 ರನ್ ಹಾಗೂ ವಿಲಿಯಮ್ಸನ್ 19 ಬಾಲ್‌ಗಳಿಗೆ 29 ರನ್ ಗಳಿಕೆ ಮಾಡಿದರು. ಆದರೆ ತಂಡ ಗೆಲ್ಲಲು ತಂಡದ ನಾಯಕ ಡಿ. ವಾರ್ನರ್ 33 ಬಾಲ್‌ಗಳಿಗೆ 47 ರನ್ ಗಳಿಸಿ ತಂಡವನ್ನು ಗೆಲ್ಲಿಸಲು ವಿಫಲಿಸಲು ಪ್ರಯತ್ನಿಸಿದರು. ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸೂಪರ್ ಓವರ್‌ಗೆ ದಾರಿ ಮಾಡಿ ಕೊಟ್ಟಿತು.
ಸೂಪರ್ ಓವರ್‌ನಲ್ಲಿ 3 ರನ್ ಅಧಿಕವಾಗಿ ಗಳಿಸುವ ಮೂಲಕ ಕೆಕೆಆರ್ ತಂಡ ಪಂದ್ಯವನ್ನು ಗೆದ್ದಿತು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ