ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರು ಬುಕ್ಕಿಗಳನ್ನು ರಾಮನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಬಸವನಪುರ ನಿವಾಸಿ ಶೇಖರ್ (37), ಮೈಸೂರಿನ ಎಂಆರ್‌ಸಿ ಕ್ಲಬ್ ಉದ್ಯೋಗಿ ಸಿದ್ದಪ್ಪ (34), ಮೈಸೂರಿನ ಸಾತಗಳ್ಳಿ ಲೇಔಟ್ ನಿವಾಸಿ ಪಂಚಾಕ್ಷರಿ (44), ಮಂಡ್ಯದ ಚಿಕ್ಕಮಂಡ್ಯ ಕೆರೆ ನಿವಾಸಿ ಮಂಜು (42) ಬಂಧಿತ ಆರೋಪಿಗಳು.
ಆರೋಪಿಗಳು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದ ನಾಲ್ವರು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.
ಬಂಧಿತ ಆರೋಪಿಗಳಿಂದ 11.36 ಲಕ್ಷ ನಗದು, ಬೆಟ್ಟಿಂಗ್‌ಗಾಗಿ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಿಟ್ಟಿದ್ದ 16.7 ಲಕ್ಷ, ಒಂದು ಕಾರು, ಎರಡು ಬೈಕ್, ಬ್ಯಾಂಕ್ ಚೆಕ್ ಪುಸ್ತಕಗಳು, ಎಟಿಎಂ ಕಾರ್ಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು