ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂಗ್ ಜಾನ್ ಉನ್, ತಮ್ಮ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದ ಜನರಿಗೆ ‘ನನ್ನನ್ನು ಕ್ಷಮಿಸಿ’ ಎಂದು ಕಣ್ಣೀರಿಟ್ಟಿದ್ದಾರೆ.
ಪಕ್ಷದ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು, ಖಂಡಾಂತರ ಕ್ಷಿಪಣಿ ಮತ್ತು ಇತರೆ ಮಿಟಿಟರಿ ಯುದ್ಧೋಪಕರಣಗಳ ಪ್ರದರ್ಶನ ಹಾಗೂ ಜನರ ಸಹಾನುಭೂತಿ ಪಡೆಯುವ ಭಾಷಣ ಮಾಡಲು ಬಳಸಿಕೊಂಡಿದ್ದಾರೆ.
‘ಕೊರೋನಾ ಕಾಲದಲ್ಲಿ ನನಗೆ ಜನರ ಜೊತೆ ಇರಲಾಗಿಲ್ಲ. ಜನ ನನ್ನ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳಲಾಗಲಿಲ್ಲ. ಹಾಗಾಗಿ ನಾನು ಅವರಲ್ಲಿ ಕ್ಷಮೆ ಬೇಡುತ್ತೇನೆ’ ಎಂದರು.
ಭಾಷಣದಲ್ಲಿ ತಮ್ಮ ತಂದೆ ಹಾಗೂ ತಾತನವರ ಆಡಳಿತ ನೆನಪಿಸಿದ ಜಾನ್ ‘ನನ್ನ ದೇಶದ ಜನರು ನನ್ನ ಮೇಲೆ ಆಕಾಶದಷ್ಟು ಎತ್ತರಕ್ಕೆ ಸಮುದ್ರದಷ್ಟು ಆಳವಾದ ನಂಬಿಕೆ ಇಟ್ಟಿದ್ದಾರೆ. ಆದರೆ ಜನರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೋರೋನಾ ಪರಿಸ್ಥಿತಿಯಲ್ಲಿ ನಾನು ಅನಿವಾರ್ಯವಾಗಿ ಜನರಿಂದ ದೂರ ಉಳಿಯಬೇಕಾಯಿತು’ ಎಂದಿದ್ದಾರೆ.
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ