March 16, 2025

Newsnap Kannada

The World at your finger tips!

police 1

ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ: ಸತೀಶ್ ಜಾರಕಿಹೊಳಿ ಆಪ್ತೆ ಸೇರಿದಂತೆ 7 ಮಂದಿ ಬಂಧನ

Spread the love

ಬೆಳಗಾವಿ: 5 ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಮಂಜುಳಾ ರಾಮಗನಟ್ಟಿ ಸೇರಿದಂತೆ ಒಟ್ಟು 7 ಮಂದಿಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 14ರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ ಅಂಬಿ ಅವರನ್ನು ಆರೋಪಿಗಳು ಅಪಹರಿಸಿ 5 ಕೋಟಿ ರೂ. ಬೇಡಿಕೆಯಿಟ್ಟಿದ್ದರು. ಈ ಪ್ರಕರಣ ದಾಖಲಾದ 24 ಗಂಟೆಗಳಲ್ಲಿಯೇ ಪೊಲೀಸರು ಬಸವರಾಜ ಅವರನ್ನು ರಕ್ಷಿಸಿ, 6 ಮಂದಿಯನ್ನು ಬಂಧಿಸಿದ್ದರು.

ತನಿಖೆ ವೇಳೆ ಅಪಹರಣದ ಮಾಸ್ಟರ್ ಪ್ಲಾನ್ ಮಂಜುಳಾ ರಾಮಗನಟ್ಟಿ ಎಂಬುವವರದ್ದು ಎಂಬ ವಿಷಯ ಬಹಿರಂಗಗೊಂಡಿದೆ. ಮಂಜುಳಾ ಅವರ ಪುತ್ರ ಈಶ್ವರ ರಾಮಗನಟ್ಟಿಯನ್ನು ವಿಚಾರಣೆ ನಡೆಸಿದಾಗ, ಅವರ ಮಾತುಗಳ ಆಧಾರದ ಮೇಲೆ ಪ್ಲ್ಯಾನ್‌ ರೂಪಿಸಿ ಅಪಹರಣ ನಡೆಸಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಸ್ಪಷ್ಟವಾಗಿದೆ.ಇದನ್ನು ಓದಿ –ಹಳೆಯ ಪಿಂಚಣಿ ಮರು ಜಾರಿ : 2.45 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

ಪೊಲೀಸರು ತನಿಖೆಯ ಸಮಯದಲ್ಲಿ ಸಿಕ್ಕ ತಾಂತ್ರಿಕ ಸಾಕ್ಷ್ಯಾಧಾರ ಹಾಗೂ ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 7 ಮಂದಿಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!