ವರನಿಗೆ ಇಷ್ಟವಾಗುವ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿ ಮದುವೆಯಾಗುತ್ತಾರೆ. ಅದು ಇಲ್ಲಿ ಕ್ರೈಂ ಅಲ್ಲ!
ಈ ಸಂಪ್ರದಾಯ ಎಲ್ಲಿದೆ ಗೊತ್ತಾ?
ಅದೊಂದು ಪುಟ್ಟ ದ್ವೀಪ. ಸಾಂಬಾ ಅಂತ ಹೆಸರು. ಈ ದ್ವೀಪದಲ್ಲಿ 7.5 ಮಿಲಿಯನ್ ಜನ ಮಾತ್ರ ವಾಸಿಸುತ್ತಾರೆ. ಆದರೆ ಇಲ್ಲೊಂದು ಸಂಪ್ರದಾಯ. ವರನಿಗೆ ಇಷ್ಟವಾಗುವ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿ ಮದುವೆಯಾಗುತ್ತಾರೆ. ಅದು ಅಲ್ಲಿ ಕ್ರೈಂ ಅಲ್ಲ!
ಹುಡುಗಿಯರು ನನಗೆ ವರ ಇಷ್ಟ ಇಲ್ಲ ಅಂದ್ರೂ ಎತ್ತಿ ಹಾಕಿಕೊಂಡು ಹೋಗಿ ಮದುವೆ ಆಗುವುದಕ್ಕೆ ಮಹಿಳೆಯರು ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಕಿಡ್ನ್ಯಾಪ್ ಮಾಡುವುದು ಕ್ರೈಂ ಎನ್ನುವುದು ಅಲ್ಲಿನ ಕಾನೂನಿಗೆ ಅನ್ವಯ ವಾಗುವುದಿಲ್ಲವಂತೆ. ಹಾಗಾಗಿ ಯುವತಿ ಹುಡುಗನಿಗೆ ಇಷ್ಟವಾದರೆ ಸಾಕು ಆತನ ಮನೆಯವರು ಕಿಡ್ನ್ಯಾಪ್ ಮಾಡಿ ಮದುವೆ ಮಾಡಿಸುವುದು ಆ ದ್ವೀಪದಲ್ಲಿ ಸಾಮಾನ್ಯವಾಗಿದೆ.
ಈಗ ಮಹಿಳಾ ಸಂಘಟನೆಗಳು ಈ ಅನಿಷ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಕಠಿಣ ಕಾನೂನು ರೂಪಿಸುವಂತೆ ಒತ್ತಾಯ ಹೇರಿವೆ. ಅಲ್ಲಿನ ಸರ್ಕಾರವೂ ಈಗ ಕಣ್ಣು ಬಿಟ್ಟು ಕಾನೂನು ರೂಪಿಸಲು ಚಿಂತನೆ ನಡೆಸಿದೆ.
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ