ತಮಿಳುನಾಡಿನಲ್ಲಿ ಖುಷ್ಬೂ ಚುನಾವಣಾ ಪ್ರಚಾರ….! ರಸ್ತೆ ಬದಿ ಅಂಗಡಿಯಲ್ಲಿ ದೋಸೆ ಮಾಡಿದ ಬಿಜೆಪಿ ನಾಯಕಿ…!!
ತಮಿಳುನಾಡಿನ ರಾಜಕಾರಣಕ್ಕೆ ಸಾಕಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು ಸುದ್ದಿ ಮಾಡಿದರು. ಇಂದು ಬಿಜೆಪಿ ಅಭ್ಯರ್ಥಿ, ನಟಿ ಖುಷ್ಬೂ ದೋಸೆ ಹಾಕಿ ಮತದಾರರ ಮನಗೆಲ್ಲೋ ಪ್ರಯತ್ನ ಮಾಡಿದರು.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರೋ ಬಿಜೆಪಿಯೂ ಅಧಿಕಾರ ಹಿಡಿಯುವ ಕನಸಿನಲ್ಲಿದೆ.
ಈ ಮಧ್ಯೆ ಬಿಜೆಪಿಯ ಎರಡು ಸ್ಟಾರ್ ಅಭ್ಯರ್ಥಿಗಳು ಎನ್ನಿಸಿಕೊಂಡಿರೋ ಅಣ್ಣಾಮಲೈ ಮತ್ತು ನಟಿ ಖುಷ್ಬೂ ಪೈಕಿ ಇಂದು ನಟಿ ಖುಷ್ಬೂ ಚುನಾವಣಾ ಪ್ರಚಾರದ ವೇಳೆ ದೋಸೆ ಅಂಗಡಿಯಲ್ಲಿ ದೋಸೆ ಹಾಕುವ ಮೂಲಕ ಮತದಾರರ ಮನಗೆಲ್ಲುವ ಸರ್ಕಸ್ ಮಾಡಿದ್ದಾರೆ.
ಚೈನ್ನೈ ನ ಥಂಡರ್ ಲೈಟ್ಸ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಖುಷ್ಬೂ ಸುಂದರ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ಪ್ರಚಾರದ ವೇಳೆ ಪುಟ್ಟ ಶಿಶುವೊಂದನ್ನು ಎತ್ತಿ ಮುದ್ದಾಡುವ ಮೂಲಕ ನೆರೆದವರ ಮನಗೆದ್ದಿದ್ದಾರೆ.
ಅಷ್ಟೇ ಅಲ್ಲ ಪ್ರಚಾರದ ಮಧ್ಯೆ ದೋಸೆ ಅಂಗಡಿಗೆ ಭೇಟಿ ನೀಡಿ ದೋಸೆ ಹಾಕಿ, ಬಳಿಕ ರಸ್ತೆ ಬದಿಯಲ್ಲೇ ದೋಸೆ ಸವಿದು ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕಮಲಕ್ಕೆ ನೆಲೆಕಲ್ಪಿಸಲು ಸರ್ಕಸ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ 2021 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು, 234 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಎಐಎಡಿಎಂಕೆ ಬಿಜೆಪಿಗೆ ಬಿಟ್ಟುಕೊಂಡಿದೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ