ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಟೀಜರ್ ಒಂದು ದಿನ ಮೊದಲೇ ಲೀಕ್ ಮಾಡಿರುವ ಹಾಕರ್ಸ್ ಕೃತ್ಯದಿಂದ ಸಿನಿಮಾ ತಂಡ ಹಾಗೂ ಯಶ್ ಅಭಿಮಾನಿಗೆ ತೀವ್ರ ನಿರಾಸೆ ತಂದಿದೆ.

ಯಶ್ ಹುಟ್ಟುಹಬ್ಬದ ದಿನವಾದ ನಾಳೆ (ಜ. 8) ಕೆಜಿಎಫ್ -2 ಸಿನಿಮಾದ ಟೀಜರ್ ( ಬೆಳಿಗ್ಗೆ 10.18 ಗಂಟೆಗೆ) ಟೀಜರ್ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದರು.
ಟೀಸರ್ ಬಿಡುಗಡೆಗೆ ಮುನ್ನಾ ದಿನವೇ ಇಂದು ಟೀಸರ್ ಲೀಕ್ ಔಟ್ ಆಗಿದೆ. ಟೀಸರ್ ಬಿಡುಗಡೆಯ ನಿಮಿಷ ಮತ್ತು ಸೆಕೆಂಡ್ ಕೂಡ ತಿಳಿಸಿದ್ರು. ಆದರೆ ಈಗ ಎಲ್ಲಾ ಉಲ್ಟಾ ಆಗಿದ್ದು, ಕುತೂಹಲ ಇಲ್ಲದಂತಾಗಿದೆ.
ಇಂದು ರಾತ್ರಿ 9.29 ಗಂಟೆಗೆ ಸಿನಿಮಾ ಟೀಜರ್ ಸಾಮಾಜಿಕ ತಾಣಗಳಲ್ಲಿ ಲೀಕ್ ಆಗಿರುವುದು ನಟ ಯಶ್ ತೀವ್ರ ಬೇಸರವನ್ನು ಹೊರ ಹಾಕಿದ್ದಾರೆ.
ಈ ಕುತಂತ್ರ ಕೃತ್ಯ ಕೆಜಿಎಫ್-2 ಸಿನಿಮಾ ಟೀಮ್ ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೇ ಮುಂದೆ ಸಿನಿಮಾ ಕೂಡ ಇದೇ ರೀತಿ ಲೀಕ್ ಆದರೆ ಹೇಗೆ ಎನ್ನುವ ಚಿಂತೆ ತಂಡದ್ದಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು