December 22, 2024

Newsnap Kannada

The World at your finger tips!

Vokkaliga . Karnataka , News

Kenchappa Gowda elected as the new president of Vokkkaliga Sangha ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೆಂಚಪ್ಪಗೌಡ ಆಯ್ಕೆ #Vokkaliga

ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೆಂಚಪ್ಪಗೌಡ ಆಯ್ಕೆ

Spread the love

ಬೆಂಗಳೂರು : ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರ ಆಯ್ಕೆಗೆ ನಡೆದ ಅವಿಶ್ವಾಸ ಗೊತ್ತುವಳಿಯಲ್ಲಿ ಕೆಂಚಪ್ಪಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೆಂಚಪ್ಪಗೌಡ ಅವರಿಗೆ 19 ನಿರ್ದೇಶಕರು ಇಂದಿನ ಅವಿಶ್ವಾಸ ನಿಲುವಳಿ ಮಂಡನೆಯ ವೇಳೆಯಲ್ಲಿ ನೀಡಿದ್ದರಿಂದ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಅವರು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಇಂದು ಮಂಡಿಸಿದ ಅವಿಶ್ವಾಸ ನಿರ್ಣಯದ ವೇಳೆಯಲ್ಲಿ ಕೆಂಚಪ್ಪಗೌಡ ಅವರಿಗೆ 19 ನಿರ್ದೇಶಕರು ಬೆಂಬಲ ಸೂಚಿಸಿದರು.ಇದನ್ನು ಓದಿ – ಆಗಸ್ಟ್ 18 ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ: ಸಚಿವೆ ಲಕ್ಷ್ಮಿ

ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೆಂಚ್ಚಪ್ಪಗೌಡ ಆಯ್ಕೆಯ ನಂತರ ಸಂಘದ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಬೆಂಬಲಿಗರು, ಕಾರ್ಯಕರ್ತರು ಸಂಭ್ರಮ ಪಟ್ಟರು.

Copyright © All rights reserved Newsnap | Newsever by AF themes.
error: Content is protected !!