January 28, 2026

Newsnap Kannada

The World at your finger tips!

ravikumar chamalapura

ಕಸಾಪ‌ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ನಿಧನ

Spread the love

ಮಂಡ್ಯ: ಇಂದು ಕಸಾಪ‌ ಜಿಲ್ಲಾ ಘಟಕದ ಅಧ್ಯಕ್ಷ, ಕನ್ನಡ ಉಪನ್ಯಾಸಕ ರವಿಕುಮಾರ್ ಚಾಮಲಾಪುರ (52) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರವಿಕುಮಾರ್ ಅವರು 2ನೇ ಬಾರಿಗೆ ಜಿಲ್ಲಾ ಕಸಾಪ‌ ಅಧ್ಯಕ್ಷರಾಗಿದ್ದರು. ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ‌ ಸಮ್ಮೇಳನ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಜಿಲ್ಲಾ, ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿ‌ ಹೆಸರುವಾಸಿಯಾಗಿದ್ದರು. ಹೋಬಳಿ ಮಟ್ಟದಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ,ಸಮ್ಮೇಳನ ನಡೆಯುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಬೋಧನೆ ಮಾಡುತ್ತಿದ್ದರು.

ಒಂದು ವರ್ಷದ ಹಿಂದೆ ಮನೆಯಲ್ಲೇ ಬಿದ್ದು ಬೆನ್ನುಹುರಿಗೆ ಹಾನಿಯಾಗಿ ಅವರು ಹಾಸಿಗೆ ಹಿಡಿದಿದ್ದರು.

ಭಾನುವಾರ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದು , ಇಂದು ಬೆಳಿಗ್ಗೆ ತೀವ್ರ ಹೃದಯಾಘಾತವಾಗಿ‌ ನಿಧ‌ನರಾದ್ದಾರೆ.ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ದಂಪತಿ ಪ್ರಣಾಪಾಯದಿಂದ ಪಾರು

ಕಾವೇರಿನಗರದ ನಿವಾಸದಲ್ಲಿ ಸಾರ್ವಜನಿಕ ‌ದರ್ಶನ ವ್ಯವಸ್ಥೆ ಮಾಡಲಾಗಿದ್ದು , ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ‌ ಎಂದು ಕುಟುಂಬದ ಮೂಲಗಳು ತಿಳಿಸಿವೆ.

error: Content is protected !!