December 23, 2024

Newsnap Kannada

The World at your finger tips!

shops

ದಿನದ 24 ಗಂಟೆಯೂ ದಿನಸಿ ಅಂಗಡಿ ತೆರೆಯಲು ಅವಕಾಶ – ಸರ್ಕಾರ ಆದೇಶ

Spread the love

ಆರ್ಥಿಕ ಪುನಶ್ಚೇತನದ ಕಾರಣಕ್ಕಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಅನುಮತಿ ನೀಡಿದೆ.

ಕರ್ನಾಟಕ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್‌ 1962 ಅಡಿ ನೋಂದಣಿ ಮಾಡಿಕೊಂಡಿದ್ದ ಅಂಗಡಿಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ನೌಕರರು ಇದ್ದರೆ ಅಂತಹ ಅಂಗಡಿಗಳನ್ನು ಮಾತ್ರ ದಿನದ 24 ಗಂಟೆ ತೆರೆಯಲು ಅವಕಾಶ ನೀಡಲಾಗಿದೆ.

ಇಂತಹದ್ದೊಂದು ಆದೇಶವನ್ನು ರಾಜ್ಯ ಸರ್ಕಾರ ಶನಿವಾರ ಹೊರಡಿಸಿದೆ. ಸರತಿ ಪಾಳಿ ಆಧಾರದಲ್ಲಿ ಸಿಬ್ಬಂದಿಗಳು ಕೆಲಸ ಮಾಡಬೇಕು. ಎಲ್ಲರಿಗೂ ವಾರದ ರಜೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಿನದ 24 ಗಂಟೆ ಶಾಪ್‌ಗಳನ್ನು ತೆರೆಯಬಹುದೆಂಬ ಸರ್ಕಾರದ ಆದೇಶಕ್ಕೆ ಬಹುತೇಕ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕೊರೊನಾ, ಲಾಕ್‌ಡೌನ್‌ನಿಂದಾಗಿ ಈಗಾಗಲೇ ಸಾಕಷ್ಟು ನಷ್ಟವಾಗಿತ್ತು. 10 ಗಂಟೆ ನಂತರವೂ ಬಹಳಷ್ಟು ಜನರು ಓಡಾಟ ನಡೆಸುತ್ತಾರೆ. ಸರ್ಕಾರದ ನೂತನ ಆದೇಶದಿಂದ ತುಂಬಾ ಅನುಕೂಲವಾಗಲಿದೆ ಎಂದು ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.

10 ಅಥವಾ ಅದಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಇರುವಂತಹ ಶಾಪ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಸಣ್ಣಪುಟ್ಟದ ಅಂಗಡಿಗಳು ಮಾಮೂಲಿಯಂತೆ ಬಾಗಿಲು ಹಾಕಬೇಕಿದೆ. ಮೋರ್‌, ಸೂಪರ್‌ ಬಜಾರ್‌ನಂತಹ ಮಧ್ಯಮ ವರ್ಗದ ಶಾಪ್‌ಗಳಿಗೆ ಈ ನಿಯಮ ಸಹಕಾರಿಯಾಗಲಿದೆ.

Copyright © All rights reserved Newsnap | Newsever by AF themes.
error: Content is protected !!