ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ
ನ್ಯಾ. ವಿಶ್ವನಾಥ ಶೆಟ್ಟಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇಲ್ಲಿಯವರೆಗೆ ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನು ಓದಿ – ಯಾವ ಪಕ್ಷ ಸೇರ್ತಾರೆ ಸಂಸದೆ ಸುಮಲತಾ ? ಕಾಂಗ್ರೆಸ್, ಬಿಜೆಪಿಯಿಂದಲೂ ದುಂಬಾಲು
ನ್ಯಾ.ಬಿ.ಎಸ್.ಪಾಟೀಲ್ 14 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅದಕ್ಕೂ ಮುನ್ನ ಅವರು 20 ವರ್ಷಗಳ ಕಾಲ ವಕೀಲರಾಗಿದ್ದರು. 2019ರ ನವೆಂಬರ್ನಲ್ಲಿ ಇವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದನ್ನು ಓದಿ – ದೆಹಲಿ ಪೊಲೀಸರಿಂದ ಸಂಸದ ಡಿ. ಕೆ. ಸುರೇಶ್ ಮೇಲೆ ಹಲ್ಲೆ – ಬಂಧನ
ದೆಹಲಿ ಪೊಲೀಸರಿಂದ ಸಂಸದ ಡಿ. ಕೆ. ಸುರೇಶ್ ಮೇಲೆ ಹಲ್ಲೆ ಮಾಡಿ ನಂತರ ಬಂಧಿಸಿದ್ದಾರೆ
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣವರ್ಗಾವಣೆ ವಿಚಾರದಲ್ಲಿ ಇಡಿ ಅಧಿಕಾರಿಗಳು ಸುಮಾರು 10 ತಾಸು ರಾಹುಲ್ ಗಾಂಧಿಯವರ ವಿಚಾರಣೆಯನ್ನು ನಡೆಸಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಭಾರೀ ಪ್ರತಿಭಟನೆಯ ನಡುವೆ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಜೊತೆಗೆ ರಾಹುಲ್ ಇಡಿ ಕಚೇರಿಗೆ ಆಗಮಿಸಿದ್ದರು.
ಮಂಗಳವಾರ ಬೆಳಗ್ಗೆ 10.40ಕ್ಕೆ ರಾಹುಲ್ ಮತ್ತು ಪ್ರಿಯಾಂಕ, ಮೊದಲು ಎಐಸಿಸಿ ಕಚೇರಿಗೆ ತೆರಳಿ ನಂತರ ಇಡಿ ಕಚೇರಿಗೆ ಬಂದರು.
ಆ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬ್ಯಾರಿಕೇಡ್ ದಾಟಿ ಬಂದಿದ್ದಕ್ಕಾಗಿ ಪೊಲೀಸರು ಬಂಧಿಸಿದರು.
ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇಡಿ ಆಫೀಸಿನ ಹೊರಗಡೆ ಬಿಗುವಿನ ವಾತಾವರಣದ ನಡುವೆ ಅಧಿಕಾರಿಗಳು ರಾಹುಲ್ ಗಾಂಧಿ ವಿಚಾರಣೆಯನ್ನು ಆರಂಭಿಸಿದ್ದಾರೆ.
ಹೊರಗಡೆ ಹಿರಿಯ ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ದ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಬಂಧಿತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ದೆಹಲಿಯ ಭದ್ರಾಪುರ ಮತ್ತು ನರೇಲಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಎಐಸಿಸಿ ಕಚೇರಿಗೆ ಇತರ ಕಾಂಗ್ರೆಸ್ ಮುಖಂಡರ ಜೊತೆಗೆ ಆಗಮಿಸುತ್ತಿದ್ದ ಎಚ್. ಕೆ. ಪಾಟೀಲ್, ಡಿ. ಕೆ. ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಪೊಲೀಸರು ತಡೆದಿದ್ದಾರೆ. ಯಾತಕ್ಕಾಗಿ ನಮ್ಮನ್ನು ತಡೆಯುತ್ತಿದ್ದೀರಾ? ಎಂದು ದಿನೇಶ್ ಗುಂಡೂರಾವ್ ಮತ್ತು ಸುರೇಶ್ ಪೊಲೀಸರ ಜೊತೆ ವಾಗ್ಯುದ್ದಕ್ಕೆ ಇಳಿದಿದ್ದಾರೆ. ಪೊಲೀಸರು ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಮಾಡುತ್ತಿದ್ದರೂ ಮಾತಿನ ಚಕಮಕಿ ಜೋರಾಗಿ ನಡೆಯುತ್ತಲೇ ಇತ್ತು.
ಆ ವೇಳೆ ಪೊಲೀಸರು, ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಹಿಂದಕ್ಕೆ ಹೋಗುವಂತೆ ಜೋರಾಗಿ ತಳ್ಳಿದ್ದಾರೆ. ನಾನೊಬ್ಬ ಸಂಸದ, ನನ್ನನ್ನೇ ತಳ್ಳುತ್ತೀರಾ ಎಂದು ಡಿ. ಕೆ. ಸುರೇಶ್ ಏರು ಧ್ವನಿಯಲ್ಲಿ ಪೊಲೀಸರತ್ತ ಹೋದಾಗ ಅವರನ್ನು ಎಚ್. ಕೆ. ಪಾಟೀಲ್ ತಡೆದಿದ್ದಾರೆ. ಇದಾದ ನಂತರ, ಮತ್ತೆ ಯಾಕೆ ನಮ್ಮನ್ನು ಅರೆಸ್ಟ್ ಮಾಡುತ್ತಿದ್ದೀರಾ, ನಾವೇನು ತಪ್ಪು ಮಾಡಿದ್ದೇವೆ ಎಂದು ಸುರೇಶ್ ಅವರು ಪೊಲೀಸರ ಜೊತೆಗೆ ಮಾತಿಗೆ ಇಳಿದಾಗ, ಅವರನ್ನು ಪೊಲೀಸರು ಬಲವಂತದಿಂದ ತಳ್ಳಿ ಪೊಲೀಸ್ ವ್ಯಾನಿನಲ್ಲಿ ಕೂರಿಸಿ, ನರೇನಾ ಠಾಣೆಗೆ ಕರೆದೊಯ್ದಿದ್ದಾರೆ.
ಸಿದ್ದರಾಮಯ್ಯ ಖಂಡನೆ :
ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋಗುತ್ತಿದ್ದರು, ಅವರನ್ನು ಆರೆಸ್ಟ್ ಮಾಡಿದ್ದಾರೆ, ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಸರ್ವಾಧಿಕಾರ ಇದು, ಇದನ್ನು ನಾನು ಖಂಡಿಸುತ್ತೇನೆ, ಬಿಜೆಪಿಯವರು ಎಮರ್ಜೆನ್ಸಿ ಬಗ್ಗೆ ಮಾತನಾಡುತ್ತಾರೆ. ಇದೇನು ಪ್ರಜಾಪ್ರಭುತ್ವವೇ? ಇದೇನು ಸರ್ವಾಧಿಕಾರವೇ? ಪೊಲೀಸ್ ಅಧಿಕಾರವೇ? ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಅಧಿಕಾರದ ಮದ, ಅದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು