January 29, 2026

Newsnap Kannada

The World at your finger tips!

government , job , India

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ 386 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ (Karnataka Food and Civil Supplies Corporation Limited) ಒಟ್ಟು 386 ಜೂನಿಯರ್ ಅಸಿಸ್ಟೆಂಟ್ (Junior Assistant), ಸೀನಿಯರ್ ಅಸಿಸ್ಟೆಂಟ್ (Senior Assistant) ಹುದ್ದೆಗಳು ಖಾಲಿಯಾಗಿವೆ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಜುಲೈ 22, 2023. ಅಭ್ಯರ್ಥಿಗಳು ಆನ್ಲೈನ್ (Online) ನಲ್ಲೂ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹರಾದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕೆಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹುದ್ದೆ ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್

  • ಒಟ್ಟು ಹುದ್ದೆ 386
  • ವೇತನ ಮಾಸಿಕ ₹ 22,800- 43,200
  • ಉದ್ಯೋಗದ ಸ್ಥಳ ಕರ್ನಾಟಕ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 22, 2023

ಹುದ್ದೆಯ ಮಾಹಿತಿ:

  • ಅಸಿಸ್ಟೆಂಟ್ ಮ್ಯಾನೇಜರ್- 10
  • ಸೀನಿಯರ್ ಅಸಿಸ್ಟೆಂಟ್- 57
  • ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್​)- 33
  • ಕ್ವಾಲಿಟಿ ಇನ್ಸ್​ಪೆಕ್ಟರ್- 23
  • ಜೂನಿಯರ್ ಅಸಿಸ್ಟೆಂಟ್- 263

ವೇತನ:

  • ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 43,100- 83,900
  • ಸೀನಿಯರ್ ಅಸಿಸ್ಟೆಂಟ್- ಮಾಸಿಕ ₹ 27,650- 52,650
  • ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್​)- ಮಾಸಿಕ ₹ 27,650- 52,650
  • ಕ್ವಾಲಿಟಿ ಇನ್ಸ್​ಪೆಕ್ಟರ್- ಮಾಸಿಕ ₹ 27,650- 52,650
  • ಜೂನಿಯರ್ ಅಸಿಸ್ಟೆಂಟ್- ಮಾಸಿಕ ₹ 21,400- 42,000

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ

ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಇತ್ಯಾದಿ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಿ.

KFCSC- ಹೊಸ ನೋಟಿಫಿಕೇಶನ್

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನು ಓದಿ –ನೂತನ ಶಾಸಕರಿಗೆ ತರಬೇತಿ ಶಿಬಿರ : ಸ್ಪೀಕರ್ ಯು.ಟಿ.ಖಾದರ್

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜೂನ್ 23, 2023
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 22, 2023
  • ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 25, 2023
  • ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜುಲೈ 26, 2023
error: Content is protected !!