Main News

ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿಢೀರ್‌ ಕುಸಿತ- ಸಚಿವ ಸುಧಾಕರ್ ಪ್ರಯತ್ನದ ಫಲ

ಕರ್ನಾಟಕವು ಕೋವಿಡ್ -19 ವಿರುದ್ಧದ ಸಮರದಲ್ಲಿ ಒಂದು ವಿಭಿನ್ನ ಆದರೆ ಗುಣಾತ್ಮಕ ಪ್ರವೃತ್ತಿಯನ್ನು ಗಮನಿಸುತ್ತಿದೆ.
ರಾಜ್ಯದಲ್ಲಿ ಸೋಮವಾರ ಕೊರೋನಾ ಸೋಂಕಿತರ ಸಂಖ್ಯೆ 3130 ಹಾಗೂ ಗುಣಮುಖರಾದ ಸಂಖ್ಯೆ 8715.
ಕಳೆದ 12 ದಿನಗಳಿಂದ ಕೊರೋನಾ‌‌ ಸೋಂಕಿತರ ಸಂಖ್ಯೆ ಕುಸಿತ್ತಲೇ ಬರುತ್ತದೆ.
ಸಚಿವ ಡಾ. ಸುಧಾಕರ್ ಅವರು ಆರೋಗ್ಯ ಇಲಾಖೆ ವಹಿಸಿಕೊಂಡ ನಂತರ ಕೊರೋನಾ ಭೀಕರತೆ
ರಾಜ್ಯದಲ್ಲಿ ಕಡಮೆ ಆಗುತ್ತಿರುವುದು ಗಮನಿಸುವ ಅಂಶವಾಗಿದೆ. ಅಲ್ಲದೇ
ಸಚಿವರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಪ್ರಯತ್ನವೂ ಫಲ ಕೊಟ್ಟಿದೆ ಎನ್ನಬಹುದು.

ಸೋಂಕಿನ ಸ್ಥಳವೂ ವರ್ಗಾವಣೆ

ಈಗ ಒಟ್ಟು ಕೋವಿಡ್ -19 ಸೊಮಕು ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ಮತ್ತು ಸಾವಿನ ಸಂಖ್ಯೆಯಲ್ಲೂ ಅಷ್ಟೇ ಪ್ರಮಾಣದ ಕುಸಿತವನ್ನು ಕಾಣಬಹುದಾಗಿದೆ. ಕರ್ನಾಟಕದ ಪ್ರಸಿದ್ಧ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಕೋವಿಡ್ ಸೋಂಕು ಹೆಚ್ಚಿನ ಜನಸಂಖ್ಯೆಯ ಸ್ದಳದಿಂದ ಕಡಿಮೆ ಜನಸಂಖ್ಯೆಯ ಸ್ಥಳಗಳಿಗೆ ಹೋಗುತ್ತಿದೆ.

ಅಕ್ಟೋಬರ್ ಮೊದಲ ವಾರ ಭೀಕರ

ಅಕ್ಟೋಬರ್ ತಿಂಗಳ ಆರಂಭದ ಒಂದು ವಾರದ ಅವಧಿಯಲ್ಲಿ ರಾಜ್ಯವು ಪ್ರತಿದಿನ ಸುಮಾರು 10,000 ಸೋಂಕು ಪ್ರಕರಣಗಳನ್ನು ಹೊಂದಿತ್ತು. ಸಾವಿನ ಪ್ರಕರಣಗಳು ಸಹ‌ ತಿಂಗಳ ಪ್ರಾರಂಭದ ಅವಧಿಯಲ್ಲಿ 200 ರ ವರೆಗೂ ಹೋಗಿತ್ತು. ಆದರೆ, ಹಿಂದಿನ ವಾರದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 5,000 ರಿಂದ 6,000ಕ್ಕೆ ಇಳಿದಿದೆ. ಸಾವಿನ ಸಂಖ್ಯೆಯೂ ಸಹ ಮೂರು ಅಂಕಿಯಿಂದ ಎರಡು ಅಂಕೆಗಳಿಗೆ ಇಳಿದಿದೆ.

ಒಟ್ಟು ಕೋವಿಡ್ -19 ಸೋಂಕು ಪ್ರಕರಣಗಳು ಮತ್ತು ಸಾವಿನ ಇಳಿಕೆಯ ಪ್ರಮಾಣವು ಉತ್ತೇಜಕ ಪ್ರವೃತ್ತಿಯಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ ಆರ್ ಬಾಬು ಹೇಳುತ್ತಾರೆ.

ಆದರೂ, ಕೆಲವು ತಜ್ಞರ ಪ್ರಕಾರ ಸೋಂಕು ಪ್ರಕರಣಗಳು ಕಡಿಮೆಯಾಗುವದಕ್ಕೆ ಕಾರಣವೆಂದರೆ, ಶೀಘ್ರವಾದ ಕೊರೋನಾ ಸೋಂಕಿನ ಪ್ರಕರಣಗಳ ಪತ್ತೆ ಮತ್ತು ವ್ಯಾಪಕ ಪ್ರಮಾಣದ ಪರೀಕ್ಷೆಗಳಾಗಿವೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ, ಕರ್ನಾಟಕ ಸರ್ಕಾರದ ಕೋವಿಡ್ -19 ತಾಂತ್ರಿಕ ಸಲಹಾ ಸದಸ್ಯರಾದ ಬಾಬು ಸಂದರ್ಶನವೊಂದರಲ್ಲಿ‌ ಹೇಳಿದ ಪ್ರಕಾರ, ‘ಸೋಂಕು ಪ್ರಕರಣಗಳ ಕುಸಿತವು, ಕೋವಿಡ್ ಹೆಚ್ಚಿನ ಜನಸಂಖ್ಯೆ ಸಾಂದ್ರತೆಯ ಪ್ರದೇಶಗಳಿಂದ ಇತರ ಪ್ರದೇಶಗಳಿಗೆ ಬದಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.’

‘ಆದ್ದರಿಂದ, ಇದು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹೊಂದಾಣಿಕೆಯೂ ಆಗಿರಬಹುದು. ಆದ್ದರಿಂದ ನಾವು ಕಾದು ನೋಡಬೇಕು’ ಎಂದು ಹೇಳಿದರು.

ಕರ್ನಾಟಕ ಕೋವಿಡ್ -19 ವಾರ್ ರೂಮ್‌ನ ಮುಖ್ಯಸ್ಥ ಮುನೀಶ್
ಮೌ ದ್ಗಿಲ್, ‘ರಜಾದಿನಗಳಲ್ಲಿ ಸಹ ಪ್ರಕರಣಗಳನ್ನು ಕಡಿಮೆಯಾಗುತ್ತಿವೆ. ಪ್ರಕರಣಗಳ ಇಳಿಕೆಯು ಹೆಚ್ಚು ಹೆಚ್ಚು ಸೋಂಕು ಪರೀಕ್ಷೆಗಳ ಮೂಲಕ ಸಾಧ್ಯವಾಗಿದೆ. ಆದರೆ ಸಾಮಾನ್ಯ ಇಳಿಕೆಯ ಪ್ರವೃತ್ತಿ ಸರಿಯಾಗಿದೆ’ ಎಂದು ಅವರು ಮಾಹಿತಿ ಹಂಚಿಕೊಂಡರು.

ಕರ್ನಾಟಕವು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದೆ ಮತ್ತು ಜನನಿಬಿಡ ಸ್ಥಳಗಳಲ್ಲಿ ನಗರ ಪ್ರದೇಶಗಳಲ್ಲಿ ಮಾದರಿ ಸಂಗ್ರಹ ಕೇಂದ್ರವನ್ನೂ ತೆರೆದಿದೆ. ಸಮರ್ಪಕ ಮುನ್ನಚ್ಚರಿಕೆಯಿಂದ ರಾಜ್ಯದ ಅನೇಕ‌ ಕಡೆಗಳಲ್ಲಿ ಪರೀಕ್ಷಾ ಶಿಬಿರಗಳನ್ನು ತೆರೆದಿದ್ದೇವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರು ನಿಜವಾದ ಅರ್ಥದಲ್ಲಿ ಕೊರೊನಾವೈರಸ್ ಯೋಧರಾಗಿ ಮಾರ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

Team Newsnap
Leave a Comment
Share
Published by
Team Newsnap
Tags: karnataka

Recent Posts

ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ

ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More

April 28, 2024

ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More

April 28, 2024

ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ

ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More

April 27, 2024

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ

ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More

April 27, 2024

14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ

ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More

April 27, 2024

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More

April 26, 2024