ಎಪಿಎಂಸಿ ಹಾಗೂ ಭೂ ಸುಧಾರಣ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕರೆ ನೀಡಿರುವ ಬಂದ್ ಸೋಮವಾರ ಯಶಸ್ವಿ ಯಾಗಿದೆ.
ರೈತ, ಕನ್ನಡ ಪರ ಸಂಘಟನೆ ಗಳು ಸೇರಿದಂತೆ ಕಾಂಗ್ರೆಸ್, ಜೆಡಿಎಸ್. ದಲಿತ ಸಂಘಟನೆಗಳು ಕರೆ ನೀಡಿದ್ದ ಬಂದ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದವು. ಕೆಲವು ಕಡೆ ಟೈರ್ ಗಳಿಗೆ ಬೆಂಕಿ ಹಚ್ವಲಾಯಿತು. ಅಟೋ. ವೋಲ್ವಾ ಊಬರ್ ಸೇರಿದಂತೆ
ಖಾಸಗಿ, ಸರ್ಕಾರಿ ಬಸ್ ವೇವೆ ಸ್ಥಗಿತಗೊಂಡಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಲವು ಬೀದಿಗಳು ಬಿಕೋ ಎನ್ನುತ್ತಿದ್ದವು.
108 ರೈತ ಸಂಘಟನೆಗಳು ಐಕ್ಯ ಸಮಿತಿ ಹೋರಾಟವನ್ನು ನಡೆಸುತ್ತಿವೆ. ಬಂದ್‌ಗೆ ಸಿಪಿಐ (ಎಂ) ಪಕ್ಷಗಳೂ ಸಹ ಸಹಮತ ವ್ಯಕ್ತ ಪಡಿಸಿವೆ. ಹಾಗಾಗಿ ರಾಜ್ಯಾದ್ಯಂತ ಬಂದ್‌ನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದೆ.
ಸರ್ಕಾರವು ರೈತ ವಿರೋಧಿ ಧೋರಣೆಗಳನ್ನು ಹೊಂದಿದೆ. ಈ ಮಸೂದೆಗಳು ರೈತರಿಗೆ ಮಾರಕವಾಗಿವೆ ಎಂದು ನಡೆಸುತ್ತಿರುವ ಪ್ರತಿಭಟನೆಗೆ ಕರವೇ ಅಧ್ಯಕ್ಷ ನಾರಾಯಣ ಗೌಡ, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ಹಾಗೂ ಇನ್ನೂ ಮುಂತಾದ ಹೋರಾಟ ಪಕ್ಷಗಳು, ಹಾಗೂ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಆದರೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ‘ಇವು ರೈತ ಪರ ಮಸುಯದೆಗಳು. ಹಾಗಾಗಿ ಬಂದ್‌ಗೆ ನನ್ನ ಬೆಂಬಲ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ‘164 ಎಪಿಎಂಸಿಗಳನ್ನು ನಾನು ಪರಿಶೀಲಿಸಿದ್ದೇನೆ. ಎಪಿಎಂಸಿಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದ್ದರು. ಅದಕ್ಕಾಗಿಯೇ ಮಸೂದೆಗಳಿಗೆ ನಾವು ಸಹಕಾರ ನೀಡುತ್ತಿದ್ದೇವೆ’ ಎಂದಿದ್ದಾರೆ.
ಬಂದ್‌ನ ಮುಂದಾಳುಗಳಲ್ಲೊಬ್ಬರಾದ ಬಡಗಲಪುರ ನಾಗೇಂದ್ರ ‘ಇದು ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ಧೋರಣೆ. ಹಾಗಾಗಿಯೇ ರೈತ, ದಲಿತ, ಕಾರ್ಮಿಕ ಸಂಘಟನೆಗಳೆಲ್ಲವೂ ಐಕ್ಯವಾಗಿ ಹೋರಾಟ ನಡೆಸುತ್ತಿವೆ. ಬಂದ್ ವೇಳೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ’ ಎಂದು ತಿಳಿಸಿದರು.
ಕೃಷಿ ಮಸೂದೆಗಳ ತಿದ್ದುಪಡಿ ಸಮರ್ಥನೆ ಮಾಡಿಕೊಂಡಿರುವ ಪ್ರಧಾನಿ ಮೋದಿಯವರು, ಹರಿಯಾಣದ ಒಬ್ಬ ರೈತನನ್ನು ಉಲ್ಲೇಖಿಸಿ ‘ಕ್ನರ್ ಚೌಹಾನ್ ಎಂಬ ರೈತ ಹೆಚ್ಚಿನ ಬೆಲೆ ಲಭಿಸುವ ನಿರೀಕ್ಷೆಯಿಂದ ಮಂಡಿಯ ಹೊರಗಡೆ ವ್ಯಾಪಾರ ಮಾಡಿ, ನಷ್ಟವನ್ನು ತನ್ನ ಮೈನೆಲೆ ಎಳೆದುಕೊಂಡ. ನಾವು ಅಂಗೀಕರಿಸಿರುವ ಕೃಷಿ ಮಸೂದೆಗಳು ರೈತರಿಗೆ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ಬರಲಿವೆ. ಯಾರು, ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಸ್ವತಂತ್ರ ಹೊಂದಿದ್ದಾರೆ’ ಎಂದು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದರು.
ಇದೇ ವೇಳೆ ಬಂದ್‌ನಲ್ಲಿ ನಡೆಯಬಹುದಾದ ವ್ಯತಿರಿಕ್ತ ಘಟನೆಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ, ಬೆಂಗಳೂರಿನಲ್ಲಿ ರೇಲ್ವೆ ನಿಲ್ದಾಣ, ವಿಮಾನ ಬನಿಲ್ದಾಣ ಹಾಗೂ ಸರ್ಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕಿ ಪೋಲಿಷ್ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಬಸ್ ಸಂಚಾರವನ್ನೇನಾದರೂ ಆರಂಭಿಸಿದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ’ ಎಂದಿದ್ದಾರೆ.
ಬಸ್ ಸಂಚಾರದ ಬಗ್ಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ‘ನಾವು ಬಂದ್‌ಗೆ ಬೆಂಬಲ ನೀಡಿದ್ದೇವೆ. ಸಾರಿಗೆ ನೌಕರರೆಲ್ಲ ಬಂದ್‌ನಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.
ಅನೇಕ ಸಂಘಟನೆಗಳು, ಓಲಾ, ಊಬರ್‌ನ ಚಾಲಕರ ಸಂಘ, ಸಮುದಾಯ ಕರ್ನಾಟಕ ಸಂಘ ಮುಂತಾದವುಗಳು ಬಂದ್‌ಗೆ ಬೆಂಬಲ ಸೂಚಿಸುವದಲ್ಲದೇ ರೈತರು, ವ್ಯಾಪಾರಿಗಳನ್ನು, ಚಾಲಕರನ್ನು, ಕಾರ್ಮಿಕರನ್ನು ಭೇಟಿ ಮಾಡಿ ಸೋಮವಾರ ನಡೆಯಲಿರುವ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬಂದ್ ವೇಳೆ ನಡೆಯಬಹುದಾದಂತಹ ದೊಂಬಿಗಳು, ಸಾರ್ವಜನಿಕ ಆಸ್ತಪಾಸ್ತಿಗಳ ನಷ್ಟವನ್ನು ತಡೆಯಲು ಪೋಲೀಸ್ ಕಮೀಷನರ್ ಕಮಲ್ ಪಂತ್ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
‘ನಗರದಲ್ಲಿ ಸೋಮವಾರ ರ್ಯಾಲಿ, ಪ್ರತಿಭಟನೆ ನಡೆಸಲು ಯಾರಿಗೂ ಅನುಮತಿ ನೀಡಿಲ್ಲ.ಬಂದ್ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದರೆ, ದೊಂಬಿ ಎಬ್ಬಿಸಿದರೆ ಅಂತಹವರ ವಿರುದ್ಧ ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ನಗರದಲ್ಲಿ ದಿನನಿತ್ಯದ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ. ಆಯಾ ವಲಯಗಳ ಡಿಸಿಪಿಗಳಿಗೆ ಭದ್ರತೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ. ಬಂದ್‌ಗೆ ಕರೆ ನೀಡಿದ ಕೆಲವರಿಂದ ಮುಚ್ಛಳಿಕೆ ಬರೆಸಿಕೊಂಡಿದ್ದಾರೆ. ಸಾರ್ವಜಿನಿಕ ಆಸ್ತಿ ಹಾಳಾದಲ್ಲಿ ಅವರ ಮೇಲೆ ಪ್ರಕರಣ ದಾಳಲೆ ಮಾಡಲಾಗುವುದು’ ಎಂದಿದ್ದಾರೆ.
ಆದರೆ ಕನ್ನಡ ಚಳುವಲಕಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ‘ಸರ್ಕಾರದ ಆಸ್ತಿಪಾಸ್ತಿ ಹಾಳಾದರೆ ಅದಕ್ಕೆ ಬಂದ್‌ಗೆ ಸಂಘಟನೆಗಳ್ನು ಹೊಣೆ ಮಾಡಿಮುಚ್ಚಳಿಕೆ ಬರೆಸಿಕೊಳ್ಳಲಿದ್ದಾರೆ. ಯಾರೂ ಮುಚ್ಚಳಿಕೆಗೆ ಸಹಿ ಮಾಡಬೇಡಿ’ ಎಂದು ಕರೆ ನೀಡಿದರು.
ಹಾಲು, ತರಕಾರಿ, ದಿನಸಿ, ಆಸ್ಪತ್ರೆ, ಔಷಧಲಾಯ, ಹೋಟೆಲ್, ಮೆಟ್ರೋ ಸೇವೆಯು ಬಂದ್ ವೇಳೆ ಲಭ್ಯವಿರುತ್ತದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇವೆಯಲ್ಲಿ ವ್ಯತ್ಯಯ, ಓಲಾ, ಊಬರ್ ಸೇವೆ ಸ್ಥಗಿತವಾಗಿರುತ್ತದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು