February 23, 2026

Newsnap Kannada

The World at your finger tips!

film

ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಕೋವಿಡ್ ಸೋಂಕು ದೃಢ

Spread the love

ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಮಹಾಮಾರಿ ಕೋವಿಡ್ ಸೋಂಕು ದೃಢವಾಗಿದೆ.‌

ಸ್ವತಃ ಕತ್ರಿನಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ನನಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ತಕ್ಷಣವೆ ಐಸೋಲೇಶನ್ ಹಾಗೂ ಹೋಮ್ ಕ್ವಾರೆಂಟೈನ್‍ಗೆ ಒಳಗಾಗಿದ್ದೇನೆ. ವೈದ್ಯರ ಸಲಹೆಯಂತೆ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ‌

ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿರುವ ಕತ್ರಿನಾ, ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಚಿರಋಣಿ, ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇರಿ ಎಂದು ಮನವಿ ಮಾಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಮೀರ್ ಖಾನ್, ಗೋವಿಂದ್, ಆರ್ ಮಾಧವನ್, ನಟಿ ಆಲಿಯಾ ಭಟ್, ಗಾಯಕ ಆದಿತ್ಯಾ ನಾರಾಯಣ್ ಅವರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಮಂಗಳವಾರ ಬೆಳಿಗ್ಗೆ ಕುನಾಲ್ ಕಮ್ರಾ ಅವರಿಗೂ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಸೋಮವಾರ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಹಾಗೂ ನಟಿ ಭೂಮಿ ಪಡ್ನೆಕರ್ ಅವರಿಗೂ ಕೂಡ ಕೋವಿಡ್ ಸೋಂಕು ದೃಢಪಟ್ಟಿದೆ.

error: Content is protected !!