January 11, 2025

Newsnap Kannada

The World at your finger tips!

datta hosabale

ಆರ್‌ಎಸ್‌ಎಸ್‌ ನ 2 ನೇ ಉನ್ನತ ಹುದ್ದೆಗೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

Spread the love

ಆರ್‌ಎಸ್‌ಎಸ್‌ ನ ಎರಡನೇ ಉನ್ನತ ಹುದ್ದೆ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ನೇಮಕ ಮಾಡಲಾಗಿದೆ.

ಮೋಹನ್ ಭಾಗವತ್ ಆರ್‌ಎಸ್‌ಎಸ್‌ ನ ಸರಸಂಘಚಾಲಕರು. ಇವರ ನಂತರದ ಸ್ಥಾನಕ್ಕೆ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಅವರು ನೇಮಕವಾಗಿದ್ದಾರೆ.

ಬೆಂಗಳೂರಿನ ಸಮೀಪದ ಚೆನ್ನೇನಹಳ್ಳಿ ಜನ ಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್) ಅಧಿವೇಶನದ ವೇಳೆ ನಡೆದ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಭೈಯಾಜಿ ಜೋಷಿಯವರು ಸರಕಾರ್ಯವಾಹರಾಗಿದ್ದರು. ಅಲ್ಲದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇದೀಗ ಮತ್ತೆ ಇದೇ ಹುದ್ದೆ ಕನ್ನಡಿಗರ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!