December 22, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ-5

Spread the love

ಕನ್ನಡ ಧ್ವಜಕ್ಕೆ ನಿರಂತರ ಅಪಮಾನ ಯಾಕೆ ?

ನಮ್ಮ ರಾಷ್ಟ್ರ ಹಲವಾರು ಸಂಪ್ರದಾಯಗಳ ತವರೂರು ಇಲ್ಲಿ ಅನೇಕ ವಿಧಧ ಭಾಷೆ, ಜನಾಂಗ, ಧರ್ಮವಿದ್ದರೂ ನಾವೆಲ್ಲಾ ಒಂದೇ ಎಂಬ ಭಾವನೆ ಇದೆ.

ರಾಜ್ಯ ಹಾಗೂ ರಾಷ್ಟ್ರೀಯ  ಧ್ವಜಕ್ಕೆ ಎದ್ದು ನಿಂತು ಗೌರವ ಸಲ್ಲಿಸುವ ನಾವುಗಳು ರಾಷ್ಟ್ರೀಯ ಹಾಗೂ ನಾಡ ಹಬ್ಬದ ದಿನಗಳಂದು ಬಹಳ ಸಂಭ್ರಮದಿಂದ ಆಚರಣೆ  ಮಾಡುತ್ತೇವೆ.
 ಆದರೆ ಕನ್ನಡ ರಾಜ್ಯೋತ್ಸವ ಎಂಬುದು   ನಾಮಮಾತ್ರಕ್ಕೆ ಸೀಮಿತವಾದುದಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಕನ್ನಡದ ಕಣ್ಣಿನಲ್ಲಿ ಸದಾ ಕಂಗೊಳಿಸುತ್ತಿರಬೇಕು.
ಧ್ವಜವನ್ನು ಹಾರಿಸಿ ಸಿಹಿ ಹಂಚಿದರು. ಮಾಡದೆ ಹಾಗೇಯೆ ಬಿಡುವರು. ಈ ರೀತಿಯ ಧ್ವಜ ಬಿಸಿಲು, ಗಾಳಿ, ಮಳೆಗೆ ನೆನೆದು ಒದ್ದೆಯಾಗಿ ಹಾಳಾಗುತ್ತಿದೆ.

ನಾ ಕಂಡಂತೆ ಆಟೋ ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೆಚ್ಚಾಗಿ ಈ ದೃಶ್ಯಗಳು ಕಂಡುಬರುತ್ತದೆ. ಧ್ವಜಾರೋಹಣ ಮಾಡುವಾಗ ಯಾವ ರೀತಿ ಗೌರವ ಸಲ್ಲಿಸುತ್ತೇವೊ ಅದೇ ರೀತಿ ಅದನ್ನು ಅವರೋಹಣ ಮಾಡುವ ಸಮಯದಲ್ಲಿ ಗೌರವ ಸಲ್ಲಿಸಬೇಕು.

Map karnataka flag

ಕೇವಲ ಕಾಟಚಾರಕ್ಕೆ ಧ್ವಜವನ್ನು ಹಾರಿಸಿ ಸುಮ್ಮನೆ ಕೂತರೆ ಸಾಲದು. ರಾಷ್ಟ್ರೀಯ ಹಾಗೂ ನಾಡ ಹಬ್ಬದ ದಿನದಂದೆ ಅದನ್ನು ಶಿಸ್ತು ಗೌರವದಿಂದ ತೆರವುಗೊಳಿಸಬೇಕು.
ಬೆಂಗಳೂರಿನ ಅನೇಕ ಕಡೆಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತದೆ. ಧ್ವಜ ಬಿಸಿಲು ಗಾಳಿಗೆ ಒಣಗಿ ಸಂಪೂರ್ಣ ಹಾಳಾಗಿದೆ. ಜನನಿಬೀಡ ಪ್ರದೇಶಗಳಲ್ಲಿ ಹೆಚ್ಚಾಗಿ ವಾಹನ ಸಂಚಾರವಿರುತ್ತದೆ. ಇಂತಹ ವಾಹನಗಳಿಂದ ಹೊರಚಿಮ್ಮುವ ಹೊಗೆಯಿಂದ ಭಾವುಟ (ಧ್ವಜ) ಸಂಪೂರ್ಣ ಹಾಳಾಗಿದೆ.

ಧ್ವಜಾರೋಹಣ ಮಾಡಿರುವವರಿಗೆ ಅದನ್ನು ಅವರೋಹಣ ಮಾಡಬೇಕೆಂಬ ಸ್ವಲ್ಪವೂ ಅರಿವೆ ಇಲ್ಲ. ಪ್ರವಾಸಿಗರೂ ಇಂತಹ ದೃಶ್ಯಗಳನ್ನು ನೋಡಿ ಅವರ ದೇಶಗಳಲ್ಲಿ ನಮ್ಮ ಧ್ವಜದ ಬಗ್ಗೆ ಮಾತನಾಡುವರು, ಪ್ರಜ್ಞಾವಂತರಾದ ನಾವು ಈ ರೀತಿ ಬೇರೆಯವರು ನಮ್ಮ ರಾಷ್ಟ್ರ ಹಾಗೂ ರಾಜ್ಯದ ಬಗ್ಗೆ ಲಘುವಾಗಿ  ಮಾತನಾಡಲು ಅವಕಾಶ ನೀಡಬಾರದು. ಬಹುತೇಕ ಸ್ಥಳಗಳಲ್ಲಿ ರಾಷ್ಟ್ರಧ್ವಜಕ್ಕಿಂತ ನಾಡ ಧ್ವಜಗಳು  ಬಿಸಿಲು ಗಾಳಿಗೆ ಹಾರಡುತ್ತಿರುವುದು ಕಂಡುಬರುತ್ತದೆ.

ಸಡಗರ ಸಂಭ್ರಮದಿಂದ ರಾಷ್ಟ್ರ ,ನಾಡ ಹಬ್ಬಗಳನ್ನು ಆಚರಿಸುವುದು ಹೆಮ್ಮೆಯ ವಿಚಾರವೇ ಹೌದು ಆದರೆ ಈ ರೀತಿ ಧ್ವಜಗಳನ್ನ ಅವರೋಹಣ ಮಾಡದೆ ಬಿಡುವುದು  ಎಷ್ಟು ಮಾತ್ರ ಸರಿ ಎಂಬುದನ್ನ ನೀವೆ ಯೋಚಿಸಿ.
ನಮ್ಮ ನಾಡಧ್ವಜಕ್ಕೆ ತನ್ನದೇ ಆದ ಗೌರವವಿದೆ ಅದನ್ನ ಕಾಪಾಡುವುದು ರಕ್ಷಿಸುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.
ಶಾಲಾ ಕಾಲೇಜುಗಳಲ್ಲಿ ಹಾಗೂ ಸರಕಾರಿ ಇಲಾಖೆಗಳಲ್ಲಿ ಇದರ ಬಗ್ಗೆ ಅರಿವು ಇರುವುದರಿಂದ ಅಲ್ಲಿ ಸಮಯಕ್ಕೆ ಸರಿಯಾಗಿ ಧ್ವಜಾ ಅವರೋಹಣ ಮಾಡುವರು ಆದರೆ ಆಟೋ ನಿಲ್ದಾಣ ,ಬಸ್ ನಿಲ್ದಾಣಗಳಲ್ಲಿ ಇದರ ಬಗ್ಗೆ ಅರಿವು ಇಲ್ಲದಿರುವುದರಿಂದ ಸಾಕಷ್ಟು ಧ್ವಜಗಳು ಬಿಸಿಲು,ಗಾಳಿಯಲ್ಲಿ ಹಾರಾಡುತ್ತಿವೆ. ಇಂತಹವರಿಗೆ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳು ಧ್ವಜದ ಅರಿವನ್ನು ಮೂಡಿಸಬೇಕು. ಯಾವ ಸಮಯದಲ್ಲಿ ಧ್ವಜಾರೋಹಣ ಮಾಡಬೇಕು,ಯಾವ ಸಮಯದಲ್ಲಿ ಧ್ವಜಾ ಅವರೋಹಣವನ್ನು ಮಾಡಬೇಕೆಂಬ ಅರಿವು,ಜಾಗೃತೆಯನ್ನು ಮೂಡಿಸಬೇಕು..

ನೆಲ, ಜಲ, ಭಾಷೆ, ನುಡಿ, ಪ್ರೀತಿ ಇವುಗಳಿಗೆ ಹೆಸರುವಾಸಿ ನಮ್ಮ ನಾಡು. ಸಂಸ್ಕಾರವನ್ನು ಕನ್ನಡ ನಾಡಿನಲ್ಲಿ ನೋಡಿ ಹಲವಾರು ಜನರು ತಿಳಿದು ಕೊಳ್ಳುತ್ತಿದ್ದಾರೆ. ಪ್ರವಾಸಿಗರು ಕನ್ನಡಿಗರ ಪ್ರೀತಿ ವಿಶ್ವಾಸ ಹಾಗೂ ಹೃದಯವಂತಿಕೆಗೆ ಮಾರುಹೋಗಿರುವುದು ನಮ್ಮ ಹೆಮ್ಮೆ . ಇದನ್ನು ಹಾಗೇಯೆ ತಲೆ ತಲಾಂತರಗಳ ವರೆಗೂ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.

ಧ್ವಜಕ್ಕೆ ಗೌರವ ಹೇಗೆ ?

  • ಕಳೆದ ವರ್ಷ ಧ್ವಜವನ್ನು ಹಾರಿಸಿದರೆ  ಅದನ್ನ ತೆಗೆಯುವುದು ಮುಂದಿನ ವರ್ಷಕ್ಕೆ,  ಮುತ್ತೈದೆಯರ ಸೌಭಾಗ್ಯದ ಸಂಕೇತವೆ (ಹರಿಶಿನ, ಕುಂಕುಮ)
     ನಮ್ಮ ಲಾಂಛನ. ಭಾಷಣಗಳಲ್ಲಿ ಉದ್ದುದ್ದ ಭಾಷಣ ಬೀಗುವ ನಾವುಗಳು ಮೊದಲು ರಾಜ್ಯ ಧ್ವಜಕ್ಕೆ ಯಾವ ರೀತಿ ಗೌರವ , ಶಿಸ್ತು ತೋರಬೇಕು ಎಂಬುದನ್ನು ಕಲಿಯಬೇಕು.
  • ಯಾರು ನಾಡಧ್ವಜಕ್ಕೆ ಅಗೌರವ ತೋರಬೇಡಿ. ಸಾಧ್ಯವಾದಷ್ಟು ಕೂಡಲೇ ಬಿಸಿಲು ಗಾಳಿಗೆ ಹಾರಡುತ್ತಿರುವ ಲಾಂಛನವ ಅದನ್ನು ಶಿಸ್ತಿನಿಂದ  ತೆಗೆಯಿರಿ. ಈ ವರ್ಷ ಧ್ವಜಾರೋಹಣ ಮಾಡಿದರೆ ಮುಂದಿನ ವರ್ಷದವರೆಗೂ ಅದನ್ನ ಅವರೋಹಣ ಮಾಡುವುದಿಲ್ಲ.
  • ಇಂತಹ ದೃಶ್ಯಗಳನ್ನ ಕಣ್ಣಾರೆ ಕಂಡ ಹಿರಿಯರೊಬ್ಬರು ನೋವಿನಿಂದ ಹೇಳುವ ಮಾತು.
  • ಆಚರಣೆಗಳು ಕೇವಲ ನಾಮ ಮಾತ್ರಕ್ಕೆ ಸೀಮಿತವಾಗಕೂಡದು. ನಮ್ಮ ಭಾಷೆ,ನೆಲ,ಜಲ,ನುಡಿ,ಧರ್ಮ,ಜೀವಸಂಕುಲ,ಪ್ರೀತಿ,ಇವುಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕು.
  • ಯತೇಚ್ಚವಾಗಿ ಆಟೋ ನಿಲ್ದಾಣಗಳಲ್ಲಿ ಈ ರೀತಿ ಲಾಂಛನಗಳು ಕಂಡುಬರುತ್ತವೆ. ಇವು ಬಿಸಿಲು ಗಾಳಿ ಮಳೆಗೆ ಒದ್ದೆಯಾಗಿ ಇವುಗಳ ಬಣ್ಣವು ಸಹ ಬದಲಾಗಿರುತ್ತವೆ. ಒಂದು ರೀತಿಯಲ್ಲಿ ಹೇಳಬೇಕಾದರೆ ನಾವುಗಳು ನಾಡಿಗೆ ಮಾಡುತ್ತಿರುವ ಅಪಮಾನ
  • ಕನ್ನಡ ಭಾಷೆಗೆ ತನ್ನದೇ ಆದ ಖ್ಯಾತಿ ಇದೆ ಅದನ್ನು ಉಳಿಸಿ ರಕ್ಷಿಸಿಕೊಂಡು ಹೋಗುವುದು ನಮ್ಮೇಲ್ಲರ ಕರ್ತವ್ಯ. ಇದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದೇ ಹೇಳಬಹುದು.
  • ಸರ್ಕಾರ ನಾಡಹಬ್ಬದ ಮಹತ್ವದ ಹಾಗೂ ಅದರ ಜವಾಬ್ದಾರಿಗಳ ಬಗ್ಗೆ ಕಿರುಹೊತ್ತಿಗೆಗಳನ್ನ ಬಿಡುಗಡೆ ಮಾಡಿ ಸಾಮಾಜಿಕ ಜಾಗೃತಿಯನ್ನು ಮೂಡಿಸಬೇಕು.
  • ಕೇವಲ ಹೆಸರಿಗೆ ಮಾತ್ರ ಆಚರಣೆ ಮಾಡುವುದಲ್ಲ. ಜೊತೆಗೆ ನಾಡಹಬ್ಬದ ಖ್ಯಾತಿಯ ಬಗ್ಗೆ ಗೌರವವನ್ನು ಸೂಚಿಸುವುದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಬೇಕು.
  • ಪ್ರಜ್ಞಾವಂತ ಸಮಾಜದಲ್ಲಿರುವ ನಾವು ನಮ್ಮ ಲಾಂಛನಗಳು ಹರಿದು ಹೋಗಿದ್ದರು ಅವುಗಳನ್ನ ನೋಡಿ ಸುಮ್ಮನೆ ಹೋಗುವುದು ಇತ್ತಿಚ್ಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
  • ಇನ್ನು ಕೆಲವರು ಇಂತಹ ಚಿತ್ರಗಳನ್ನು ತೆಗೆದು ಫೇಸ್ಬುಕ್ ಹಾಗೂ ವಾಟ್ಸಪ್ ಗಳಿಗೆ ಹಾಕಿ ಎಷ್ಟು ಲೈಕ್ಸ್ ಎಷ್ಟು ಕಮೆಂಟ್ಸ್ ಬರುತ್ತದೆಯೆಂದು ನೋಡುವರು ವಿನಃ ಅವುಗಳನ್ನು ಅವರೋಹಣ ಮಾಡುವುದಕ್ಕೆ ಮುಂದಾಗುವುದಿಲ್ಲ. ಇದು ದೇಶದ ದೊಡ್ಡ ದುರಂತವೆಂತಲೂ ಹೇಳಬಹುದು. ಪ್ರಜ್ಞಾವಂತ ನಾಗರೀಕರೇ ಇನ್ನಾದರೂ ಎಚ್ಚೆತ್ತುಕೊಂಡು ಧ್ವಜರೋಹಣ ಮಾಡಿದ ದಿನವೇ ಧ್ವಜಾ ಅವರೋಹಣ ಅತ್ಯಂತ ಶಿಸ್ತು ,ಗೌರವದಿಂದ ಮಾಡಬೇಕಿದೆ. ಜಿಲ್ಲಾಡಳಿತಗಳು ಈ ವಿಷಯದ ಬಗ್ಗೆ ಸರಿಯಾದ ನಿಲುವನ್ನು ಹೊಂದಬೇಕು.
gowrish
ಗೌರೀಶ್ ಟಿ. ಎಸ್.

Copyright © All rights reserved Newsnap | Newsever by AF themes.
error: Content is protected !!