November 16, 2024

Newsnap Kannada

The World at your finger tips!

literature,language,mandya

Kannada language should be developed while preserving our own - TS Nagabharana ನಮ್ಮತನ ಉಳಿಸಿಕೊಂಡು ಕನ್ನಡ ಭಾಷೆಯನ್ನು ಬೆಳೆಸಬೇಕು- ಟಿಎಸ್ ನಾಗಾಭರಣ #thenewsnap #Kannada_news #latestpost #kannada #karnataka #latestnews #language #culture #bengaluru #Mandya #mysuru

ನಮ್ಮತನ ಉಳಿಸಿಕೊಂಡು ಕನ್ನಡ ಭಾಷೆಯನ್ನು ಬೆಳೆಸಬೇಕು- ಟಿಎಸ್ ನಾಗಾಭರಣ

Spread the love

ಕರ್ನಾಟಕಕ್ಕೆ ಕನ್ನಡವೇ ಸಾರ್ವಭೌಮ ಎಂಬುದನ್ನು ರಾಜ್ಯ ಸರ್ಕಾರ ಹಾಗೂ ಜನತೆ ಸಾರಿ ಹೇಳಬೇಕು ಶ್ರೇಷ್ಠ ಕನ್ನಡ ಭಾಷೆಯನ್ನು ಮೊದಲು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಸರ್ಕಾರ ಸೇರಿದಂತೆ ಎಲ್ಲರ ಮೇಲಿದೆ ಎಂದು ರಂಗಕರ್ಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಅಭಿಪ್ರಾಯಪಟ್ಟರು

ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸೇನೆ ಆಯೋಜಿಸಿದ್ದ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಎಂಬ ಕುರಿತ ಚಿಂತನ ಮಂಥನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

3000 ವರ್ಷಗಳ ಇತಿಹಾಸವಿರುವ ಶ್ರೇಷ್ಠ ಕನ್ನಡ ಭಾಷೆಗೆ ಪಂಪನಿಂದ ಕುವೆಂಪುರವರ ಕೊಡುಗೆ ಅನನ್ಯವಾದುದು ಎಂದ ಅವರು ಕನ್ನಡ ಭಾಷೆ ಇಂದು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕೆ ಎಲ್ಲರೂ ಯತ್ನಿಸಬೇಕಾಗಿದೆ ವೈಚಾರಿಕ ನೆಲೆಗಟ್ಟಿನಲ್ಲಿ ಕನ್ನಡದ ಎಲ್ಲಾ ಬೆಳವಣಿಗೆಗೂ ಮಂಡ್ಯ ಜಿಲ್ಲೆ ಮಹತ್ತರ ಕೊಡುಗೆಯನ್ನು ನೀಡಿದೆ ಶಿಕ್ಷಣ ಉದ್ಯೋಗ ಆಡಳಿತ ಕಲಾಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಇಂದು ದೊಡ್ಡ ಸವಾಲು ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇದನ್ನು ಓದಿ –ಹೆಣ್ಣುಮಕ್ಕಳ ಜತೆಗೆ ಅಸಭ್ಯ ವರ್ತನೆ: ಮೈಸೂರಿನ ಕಾಮುಕ ಶಿಕ್ಷಕ ಕೆಲಸದಿಂದಲೇ ವಜಾ

ಸಂವಿಧಾನ ಬದಲಾಗಬಾರದು ಆದರೆ ಅದರಲ್ಲಿ ಹೇಳಿರುವಂತೆ ರಾಜ್ಯ ಕೇಂದ್ರ 23 ಭಾಷೆಗಳ ಅಭಿವೃದ್ದಿ ಆಶಯಗಳ ಕುರಿತ ಅಭಿವೃದ್ಧಿಗೆ ಸಮಾನವಾದ ಅವಕಾಶವನ್ನು ನೀಡಬೇಕು ನೀಡಬೇಕು ಆದರೆ ಈ ಪರಿಸ್ಥಿತಿ ತಾರುಮಾರಾಗಿದ್ದು ಆಂಗ್ಲ ಭಾಷೆ ಹಾಗೂ ಹಿಂದಿಯ ಹೇಳಿಕೆ ದಬ್ಬಾಳಿಕೆ ಅತಿಯಾಗಿದೆ ಜನರೆಲ್ಲರೂ ಇಂಗ್ಲಿಷ್ ಭಾಷೆಯ ದಾಸರಾಗುತ್ತಿದ್ದಾರೆ ,ಕನ್ನಡವನ್ನು ನಿರ್ಲಕ್ಷಿಸಿ ತುಳಿಯಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು .

ಮೊದಲು ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದಾದರೆ ಶೈಕ್ಷಣಿಕ ಸಾಂಸ್ಕೃತಿಕ ವೈಚಾರಿಕ ನೆಲೆಗಟ್ಟಿನಲ್ಲಿ ಕ್ರಾಂತಿಕಾರಿಯಾದ ಬದಲಾವಣೆಯಾಗಬೇಕು ಎಂದ ಅವರು ಆಡಳಿತ ವ್ಯವಸ್ಥೆಯ ನಿಟ್ಟಿನಲ್ಲಿ ಹೈದರಾಬಾದ್ ಪ್ರಾಂತ್ಯ ಮೈಸೂರು ಹಳೆ ಮೈಸೂರು ಪ್ರಾಂತ್ಯ ಮತ್ತು ಮಂಗಳೂರು ಹೀಗೆ ಆಶಯಗಳ ವೈವಿಧ್ಯತೆಯಿಂದಾಗಿ ಭಾಷೆಯ ಒಗ್ಗೂಡುಕೆ ಬಹುದೊಡ್ಡ ಸವಾಲಾಗಿದೆ ಗೆ ಹೋರಾಟ ಅನಿವಾರ್ಯವಾಗಿದ್ದು ಎಲ್ಲರೂ ಕೂಡ ಭಾಷಾಭಿಮಾನದ ವಿಷಯದಲ್ಲಿ ನೆರೆಯ ತಮಿಳುನಾಡಿನ ಜನತೆಯನ್ನು ನೋಡಿ ಕಲಿಯಬೇಕಾಗಿದೆ ಎಂದರು .

ಕರ್ನಾಟಕದಲ್ಲಿ ಕನ್ನಡಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸುವ ಬಗ್ಗೆ ಹೋರಾಟ ಅತ್ಯಂತ ಅನಿವಾರ್ಯವಾಗಿದ್ದು ಕನ್ನಡ ಭಾಷೆಗೆ ಅದರದ್ದೆ ಆದ ಸಂಸ್ಕೃತಿ ಇದೆ ಭಾಷೆ ಬದುಕನ್ನು ಹೇಳುತ್ತದೆ ಅದೇ ರೀತಿ ಸ್ವಚ್ಛ ಕನ್ನಡವನ್ನು ಮಾತನಾಡುವ ಶ್ರೇಷ್ಠ ಜಿಲ್ಲೆ ಮಂಡ್ಯ ಜಿಲ್ಲೆಯಾಗಿದ್ದು ಜನಪದ ಸಂಸ್ಕೃತಿಯ ತವರು ಜಿಲ್ಲೆಯಾಗಿದೆ ಎಂದು ಅಭಿಮಾನಿಸಿದರು .ರಾಗಿ ಪದ, ತತ್ವಪದ ಸೋಬಾನ ಪದಗಳು ನಾಟಕಗಳು .ರಂಗ ಚಟುವಟಿಕೆಗಳು ಎಲ್ಲೂ ಇಲ್ಲದ ವೈಶಿಷ್ಟತೆಯನ್ನು ಮಂಡ್ಯ ಜಿಲ್ಲೆಗೆ ತಂದು ಕೊಟ್ಟಿದೆ ಮಂಡ್ಯ ಮಂಡ್ಯ ಜಿಲ್ಲೆಯ ಭಾಷೆಗಳು ವಿಶಿಷ್ಟವಾಗಿದ್ದು ಅಚ್ಚ ಕನ್ನಡವನ್ನು ಮಾತನಾಡುವ ರಾಜ್ಯದ ಮೊದಲ ಜಿಲ್ಲೆಯಾಗಿದೆ ಎಂದು ಶ್ಲಾಘಿಸಿದರು.ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ : ಮಹಾರಾಷ್ಟ್ರದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಹತ್ಯೆ! 

ಭಾಷಾ ಸೂತ್ರ ಅಳವಡಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಟ್ಟಿ ನಿಲುವು ತಡೆಯಬೇಕು ಒಂದರಿಂದ ಒಂದನೇ ಹತ್ತನೇ ತರಗತಿಯವರಿಗೆ ಕನ್ನಡವೇ ಪ್ರಧಾನ ಭಾಷೆಯಾಗಬೇಕು ಹೀಗಾದಾಗ ಮಾತ್ರ ಶೈಕ್ಷಣಿಕ ಸಾಂಸ್ಕೃತಿಕ ಅಧಿಪತ್ಯಸಾಧ್ಯ ಎಂದರು ಕನ್ನಡ ಭಾಷೆಯ ಉಳಿಸುವಿಕೆಗೆ ಶಾಸನಬದ್ಧ ಕ್ರಮವಾಗಬೇಕು ಎಂದು ಶ್ಲಾಘಿಸಿದರು .ಇದುವರೆಗೂ ಕನ್ನಡ ಭಾಷೆಯ ಕುರಿತು ಸಂವಿಧಾನದಲ್ಲಿ ಯಾವುದೇ ಕಾನೂನನಾಗಲಿ ಚಿಂತನೆಗಳಾಗಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಮಂಡ್ಯ ಜಿಲ್ಲೆಯಲ್ಲಿ ವೈಚಾರಿಕತೆಗೆ ಕೊರತೆ ಇಲ್ಲ ಎಂದ ನಾಗಾಭರಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ಹುಡುಕುವ ಪ್ರಯತ್ನವಾಗಲಿ ಎಂದು ಆಶಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪದ್ಮಶ್ರೀ ಜಿಲ್ಲಾಧ್ಯಕ್ಷ ಮಂಜಮ್ಮ ಜೋಗತಿ ಜಿಲ್ಲಾಧ್ಯಕ್ಷ ಮಂಜುನಾಥ್, ಮುನಿಕೃಷ್ಣ ಇತರರು ಭಾಗವಹಿಸಿದ್ದರು ಸಮಾರಂಭದಲ್ಲಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಜಯಮ್ಮ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷ ಮಂಜುನಾಥ್ ಪ್ರಸ್ತಾವಿಕ ನುಡಿ ಯಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಕನ್ನಡ ಅಭಿಮಾನಿಗಳು ಕನ್ನಡ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!