ಕಪ್ಪು ಮಣ್ಣ ಒಡಲಹೂವು
ಹಸಿರ ರಾಶಿ ತುಂಬ ಎಲರು
ಹಕ್ಕಿದನಿಯ ಮಧುರ ಕೊರಳು |
ಒಲವಝರಿ ಕಾಂತಿ ಖನಿ
ಎದೆಯನೋವ ಉಸಿರ ಬಿಕ್ಕು
ನದಿನೀರ ಬೆವರ ಪಲುಕು |
ಗಿರಿಸಿರಿಯ ಮೈಯ ಕಸುವು
ಗಂಧಗಾಳಿ ನೆಲದ ಸೊಗಡು
ಗುಡಿಶಿಲ್ಪ ಬೆರಗು ಬೆಡಗು |
ಹಳದಿಕೆಂಪು ಬಣ್ಣದೋಕುಳಿ
ಭಾವ ದುಡಿಯ ನುಡಿಸಿ ನಕ್ಕು
ಕಣ್ಣತುಂಬ ಭಾಷೆಚಿಲುಮೆ |
ಸಾವಿರದ ನಿರಿ ಪತ್ತಲ
ಉಟ್ಟು ತೊಟ್ಟು ಉಣಿಸಿ ತಣಿಸಿ
ಜಗದಗಲ ಕಂಪಬೀರಿ |
ಚುಕ್ಕಿ ಚಂದ್ರ ಎರಕಹೊಯ್ದ
ಸುಮಮಾಲೆಯ ಸಿರಿ ಸುಂದರಿ
ನೆಮ್ಮದಿಯೀವ ಮಡಿಲ ರಾಣಿ|
ಬದುಕು ಕೊಟ್ಟ ತಾಯೆ ನಿನಗೆ ಮಕ್ಕಳೆಲ್ಲರ ನಮೋ ನಮೋ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ