December 23, 2024

Newsnap Kannada

The World at your finger tips!

6f1e5cc9 4566 4b39 a3a4 b7acd23fe1c9

‘ಭೂಮಿಯಲ್ಲಿ ಇರುವಷ್ಟು ದಿನ ಸಂತೋಷ ಸಂಬಂಧ, ನಂತರ ನೆನಪು – ನಟ ಜಗ್ಗೇಶ್

Spread the love

ಜಗ್ಗೇಶ್ ಇತ್ತೀಚಿಗಷ್ಟೆ ಪತ್ನಿ ಪರಿಮಳ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಕುಟುಂಬದರೆಲ್ಲರು ಸೇರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಆ ಸಂದರ್ಭದಲ್ಲಿ ತೆಗೆದ ಕುಟುಂಬದ ಫೋಟೋವನ್ನು ಶೇರ್ ಮಾಡಿ, ಸುಂದರವಾದ ಪುಟ್ಟ ಕುಟುಂಬದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

“ಮಡದಿ ಪರಿಮಳಗೆ ಸಣ್ಣ ಸಂತೋಷ ನೀಡಿದ ನನ್ನ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪುಮಾತ್ರ” ಎಂದಿದ್ದಾರೆ.

“ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ” ಎಂದು ಬರೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!