ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ, ಬಲ್ಲಿರಾ
ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ, ಅಟ್ಟುಣ್ಣದ ವಸ್ತುಗಳಿಲ್ಲ- ನೆಲೆ ಆದಿಕೇಶವರಾಯನ ನೆನೆಕಂಡ್ಯಾ ಮನುಜ.
ಕನಕದಾಸ ಸಾಹಿತ್ಯದ ನಿತ್ಯ ಸಂಜೀವಿನಿ ಎಂದೇ ಹೇಳುವ ಈ ಕೀರ್ತನೆ ಮನುಷ್ಯನ ಬದುಕಿನ ಸರಳತೆಯನ್ನು ತೋರಿಸಿ ಕೊಟ್ಟಿದೆ.
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಮಿನುಗಿದ ಎರಡು ನಕ್ಷತ್ರಗಳೆಂದರೆ ಪುರಂದರದಾಸರು ಮತ್ತು ಕನಕದಾಸರು ವ್ಯಾಸರಾಯರಿಂದ ಹೆಚ್ಚಿಸಿಕೊಂಡವರು.
ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ೧೫೦೯ರಲ್ಲಿ ಬೀರಪ್ಪ, ಬಚ್ಚಮ್ಮ ದಂಪತಿಯ ಮಗನಾಗಿ (ಕುರುಬ ಜನಾಂಗದಲ್ಲಿ) ಜನಿಸಿದರು.
ಅವರೆ ಹೇಳಿಕೊಂಡಂತೆ ‘ನಾವು ಕುರುಬರು ಕಾಯ ನಮ್ಮಜ್ಜ ನರಕುರಿಹಿಂಡುಗಳ’
ಇವರ ಪೂರ್ವಾಶ್ರಮದ ಹೆಸರು ತಿಮ್ಮಪ್ಪ ನಾಯಕ. ವಿಜಯನಗರ ಸೈನ್ಯದಲ್ಲಿ ಬೀರಪ್ಪ ಮುಖ್ಯಸ್ಥ ರಾಗಿದ್ದರು.
ಕನಕನಾದ ಸಂತ – ವೈರಾಗಿಯಾದರು:
ತಿಮ್ಮಪ್ಪ ಉಳುಮೆ ಮಾಡುವಾಗ ಹೊಲದಲ್ಲಿ ಸಿಕ್ಕ ಚಿನ್ನದ ಕೊಪ್ಪರಿಕೆಯನ್ನು ಕಾಗಿನೆಲೆ ಆದಿ ಕೇಶವನಿಗೆ ಅರ್ಪಿಸಿ ಕನಕರಾದರು. ತಂದೆ ಸತ್ತ ನಂತರ ತಿಮ್ಮಪ್ಪ ವಿಜಯನಗರ ಸೈನ್ಯದಲ್ಲಿ ಡಣಾಯಕ ಪದವಿಯಲ್ಲಿದ್ದರು. ತಿಮ್ಮಪ್ಪ ಯುದ್ಧ ಮಾಡುತ್ತಿರುವಾಗ ಯುದ್ಧದಲ್ಲಿ ಶತ್ರು ಸೈನ್ಯ ಮುಂದುವರೆಯುತ್ತಿ ದ್ದಾಗ ತಿಮ್ಮಪ್ಪನ ಸೈನ್ಯಕ್ಕೇ ಸೋಲುಂಟಾಗುತ್ತಿದ್ದಾಗ, ಶಕ್ತಿ ಕುಂದುತ್ತಿರುವುದನ್ನು ಗಮನಿಸಿದ ತಿಮ್ಮಪ್ಪ ಯುದ್ಧವನ್ನು ತ್ಯಜಿಸಿದರು.
ಈ ಸೋಲೇ ಅವರಿಗೆ ವೈರಾಗ್ಯ ಉಂಟಾ ಗಲೂ ಕಾರಣವಾಯಿತು.ಯುದ್ಧ ಮುಗ್ಧರನ್ನು ಅರಳುವ ಪೀಳಿಗೆಯನ್ನು ನಾಶಮಾಡುತ್ತದೆ. ಯುದ್ಧವನ್ನು ನಿರಾಕರಿಸಿ ಸಂತರಾದರು.
ಸಂತನಾಗಿ ಊರೂರು ಅಲೆದು ಉಡುಪಿ, ಬೇಲೂರು, ಹಳೆಬೀಡು, ಕೆರೆತೊಣ್ಣೂರು, ಮೇಲುಕೋಟೆ, ಶ್ರೀರಂಗಪಟ್ಟಣ, ನಂಜನಗೂಡು, ತಿರುಪತಿಯನ್ನು ಭೇಟಿಮಾಡಿ, ಕೀರ್ತನೆಗಳನ್ನು ಹಾಡುತ್ತ ಸಾಗಿದರು.
ಬ್ರಾಹ್ಮಣ ಶೂದ್ರ ಜನಾಂಗದವರಿಗೂ ನಡೆಯುತ್ತಿದ್ದ ವರ್ಗ ಕಲಹವನ್ನು ಸ್ವತಃ ಕನಕದಾಸರೆ ಅನುಭವಿಸಿದ್ದರು. ಉಡುಪಿಯಲ್ಲಿ ದೇವಾಲಯದ ಪ್ರವೇಶಕ್ಕೆ ದೇವರ ದರ್ಶನಕ್ಕೆ ಅವಕಾಶ ನೀಡದ ಜನರ ನಡುವೆ, ನೀ ಕಲ್ಲಾಗಿ ಏಕೀರಿವೆ ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಹಾಡಿದಾಗ, ಬಾ ಬಯಲಿಗೆಂದು ಭಕ್ತಿಯಿಂದ ಕರೆದಾಗ ಪೂರ್ವಾಭಿಮುಖವಾಗಿದ್ದ ಶ್ರೀ ಕೃಷ್ಣ ಪಶ್ಚಿಮಾಭಿಮುಖವಾಗಿ ತಿರುಗಿ ಕನಕನಿಗೆ ದರ್ಶನ ನೀಡಿದರು.
ನೀ ಮಾಯೆಯೊಳಗೋ, ನಿನ್ನೋಳು ಮಾಯೆಯೋ ಬಯಲು ಆಲಯದೊಳಗೋ ಆಲಯದೋಳು ಬಯಲೋ’
ಕೀರ್ತನೆಯನ್ನು ರಚಿಸಿದ್ದು ಇದೇ ಸಂದರ್ಭದಲ್ಲೆ.ಕನಕರ ಬಗ್ಗೆ ಹಲವಾರು ಐತಿಹ್ಯಗಳಿವೆ.
೧)ಉಡುಪಿಯಲ್ಲಿ ೨ ವರ್ಷಕ್ಕೊಮ್ಮೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿಯಲ್ಲಿ ಕುಳಿತ್ತಿದ್ದ ಗುರುಗಳಾದ ವ್ಯಾಸರಾಯರು ಕೃಷ್ಣನ ವಿಗ್ರಹಕ್ಕೆ ಹೂವಿನ ಹಾರಹಾಕಲೆಂದು ತಂದಿರುವ ಹಾರ ಚಿಕ್ಕದಿರುತ್ತದೆ. ಅದನ್ನು ಕೃಷ್ಣನ ಕೊರಳಿಗೆ ಹಾಕುವುದಕ್ಕಾಗದೆ ಪರಿತಪಿಸಿತಿರುತ್ತಾರೆ, ಇದನ್ನ ಗಮನಿಸಿದ ಕನಕದಾಸರು ಹಾರವನ್ನು ಪಾದಕರ್ಪಿಸುವಂತೆ ಸಲಹೆ ನೀಡುತ್ತಾರೆ
೨) ವ್ಯಾಸರಾಯರು ಶಿಷ್ಯರಿಗೆ ಸ್ವರ್ಗಕ್ಕೆ ಯಾರೋಗುತ್ತಾರೆಂದು ಪ್ರಶ್ನೆ ಮಾಡಿದಾಗ ಶಿಷ್ಯರೆಲ್ಲಾ ನಾನೋಗುತ್ತೇನೆ ನಾನೋಗುತ್ತೇನೆನ್ನುತ್ತಾರೆ. ಆಗ ಕನಕದಾಸರನ್ನು ಕೇಳಿದಾಗ ‘ನಾನು’ಹೋದರೆ ಹೋಗೆನು’ ಅಂದರೆ ನಾನು ಎಂಬ ಅಹಂಕಾರ ಹೋದರೆ ನಾನು ಸ್ವರ್ಗಕ್ಕೋಗುತ್ತೇನೆನ್ನುತ್ತಾರೆ
೩)ವ್ಯಾಸರಾಯರು ಶಿಷ್ಯರಿಗೆ ಬಾಳೆಹಣ್ಣನ್ನು ಕೊಟ್ಟಿ ಇದನ್ನು ಯಾರು ಇಲ್ಲದ ಕಡೆ ತಿನ್ನಬೇಕೆನ್ನುತ್ತಾರೆ. ಶಿಷ್ಯರೆಲ್ಲರು ನಾವು ಗೋಡೆಯ ಮರೆಯಲ್ಲಿ, ಬೆಟ್ಟದ ಮೇಲೆ,ಕಂಬಳಿ ಮುಚ್ಚಿಕೊಂಡು ತಿಂದೆವು ಎನ್ನುತ್ತಾರೆ. ಆದರೆ ಕನಕದಾಸರು ಮಾತ್ರ ಬಾಳೆಹಣ್ಣನ್ನು ತಿನ್ನದೆ ನಾ ಎಲ್ಲಿ ಹೋದರೂ ಶ್ರೀಕೃಷ್ಣನಿದ್ದಾನೆ. ಅವನು ಎಲ್ಲಾ ಕಡೆ ಇರುವನು.ಅವನನ್ನು ಮರೆ ಮಾಚಿ ತಿನ್ನುವುದು ಕಷ್ಟ. ಅದಕ್ಕೆ ನನಗೂ ತಿನ್ನಲು ಮನಸ್ಸಾಗಲಿಲ್ಲವೆಂದು ಉತ್ತರಿಸುತ್ತಾರೆ.
ಕನಕದಾಸರು ಪ್ರಮುಖವಾಗಿ ಮೋಹನತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ವನಳಚರಿತೆ, ನೃಸಿಂಹಸ್ತುತಿ, ಕೃತಿಗಳನ್ನು ರಚಿಸಿದ್ದಾರೆ. ನೃಸಿಂಹ ಸ್ತುತಿ l ಲಭ್ಯವಿಲ್ಲ.
ಮೋಹನ ತರಂಗಿಣಿ: ಸಾಂಗತ್ಯ ಕೃತಿ, ವಿಜಯನಗರದ ವೈಭವವನ್ನ ಶ್ರೀ ಕೃಷ್ಣನ ಅಮರಾವತಿಗೆ ಹೋಲಿಸಿ ಬರೆದಿದ್ದಾರೆ.
ಈ ಕಾವ್ಯವನ್ನು ತನ್ನ ಹೆಂಡತಿ ಸುಜ್ಞಾನ ವಧೂಟಿಗೆ ಹೇಳಿದ್ದಾರೆ. .ಶ್ರೀ ಕೃಷ್ಣ, ಪ್ರದ್ಯುಮ್ನನ ಇತಿಹಾಸವನ್ನು ಕಾವ್ಯ ಹೇಳುತ್ತದೆ. ಇದೊಂದು ಶೃಂಗಾರ ಕಾವ್ಯ. ರಾಮಧಾನ್ಯಚರಿತೆ: ಬ್ರಾಹ್ಮಣ ಶೂದ್ರರ ವರ್ಗದ ಬಗ್ಗೆ ಚರ್ಚಿತವಾಗಿರುವ ಕೃತಿ. ರಾಗಿ ಭತ್ತವನ್ನು ಸಾಂಕೇತಿಕವಾಗಿಟ್ಟುಕೊಂಡು, ಬಡವರ ಪರವಾಗಿ ರಾಗಿ, ಶ್ರೀಮಂತರ ಪರವಾಗಿ ಭತ್ತ. ಜಾತಿ ಮೇಲು ಕೀಳು, ಬಡವ ಬಲ್ಲಿದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ನವಧಾನ್ಯಗಳಲ್ಲಿ ಯಾವುದು ಶ್ರೇಷ್ಟವೆಂದು ಚರ್ಚೆಗೆ ಬಂದಾಗ ಭತ್ತ ರಾಗಿ ಅಂತಿಮ ಸ್ಪರ್ಧೆಗೆ ಬಂದಾಗ 6 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿ ಶ್ರೀರಾಮನ ಪಟ್ಟಾಭಿಷೇಕದ ದಿನ ಭತ್ತ ರಾಗಿಯನ್ನು ಸಭೆಗೆ ಆಹ್ವಾನಿಸಿದಾಗ ಭತ್ತ ಮುಗ್ಗೋಗಿ ವಾಸನೆ ಬರುತ್ತೆ ಎಲ್ಲರು ಮೂಗು ಮುಚ್ಚಿಕೊಳ್ಳುತ್ತಾರೆ.ಆದರೆ ರಾಗಿ ಮಾತ್ರ ಒಂದು ಗುಲಗಂಜಿಯಷ್ಟು ಮಾತ್ರ ಕಾಂತಿಯನ್ನು ಕಳೆದುಕೊಂಡಿರುವು ದಿಲ್ಲ. ಸಭೆಯಲ್ಲೆ ಶ್ರೀರಾಮ ತೀರ್ಪು ನೀಡುತ್ತಾನೆ. ರಾಗಿಯೇ ಶ್ರೇಷ್ಟ, ಶಕ್ತಿಶಾಲಿ.
ನಳಚರಿತೆ: ನಹುಷ ದೇಶದ ರಾಜ ನಳ. ಮಹಾರಾಜ ನಳ ದಮಯಂತಿ ಆದರ್ಶ ದಂಪತಿಗಳ ಚರಿತೆ.ನಳ ಮಹಾರಾಜ ಎಲ್ಲವನ್ನೂ ಕಳೆದುಕೊಂಡು,ಕಾಡಿನಲ್ಲಿ ದಂಪತಿಗಳು ಅಲೆಯುತ್ತಿರುವ ಚಿತ್ರ.ನಳನ ಬಟ್ಟೆಯನ್ನು ಹದ್ದು ಕಿತ್ತು ಕೊಂಡೋಗುತ್ತದೆ. ದಮಯಂತಿಯ ಸೀರೆಯ ಅರ್ಧ ಭಾಗವನ್ನು ಮೈ ಗೆ ಒತ್ತಿಕೊಂಡು ಮಲಗಿ ರಾತ್ರಿ ಕಳೆಯುತ್ತಾರೆ. ಬೆಳಿಗ್ಗೆ ಹೆಬ್ಬಾವೊಂದು ಅವರನ್ನು ಮುತ್ತುತ್ತದೆ. ಗಂಡ ಹೆಂಡಿರಿಬ್ಬರು ಬೇರೆಯಾಗಿ ಅಲ್ಲಿಂದ ದಮಯಂತಿ ಅಪ್ಪನ ಮನೆಯ ಸೇರುತ್ತಾಳೆ. ಆ ನಂತರ ನಳ ಕೂಡ ಮಾವನ ಮನೆ ಸೇರಿ ಕಳೆದುಕೊಂಡ ಸಾಮ್ರಾಜ್ಯವನ್ನು ಪಡೆಯುವ ಕಥೆಯೇ ನಳಚರಿತೆ.
ಹರಿಭಕ್ತಿಸಾರ: ಧೀನನಾನು ಸಮಸ್ತ ಲೋಕಕೆ ದಾನಿ ನೀನು ಮಹಾ ಮಹಿಮನೀನು ಎಂದು ಹರಿಯನ್ನ ಹೊಗಳಿರುವ ಕೃತಿ.
ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ.’ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ’.
ಕನಕದಾಸರ ಪ್ರಸಿದ್ಧ ಕೀರ್ತನೆ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಮಾಜದಲ್ಲಿ ಬರುವ ಹಲವಾರು ಜಾತಿಗನುಗುಣವಾಗಿ ವೃತ್ತಿಗಳು ವೇದಶಾಸ್ತ್ರ,ಪಂಚಾಗವನ್ನೋ ದುವವರು,ಕಳ್ಳರು,ಕಟ್ಟಿಗೆಮಾರುವವರು,ಕುಂಬಾರರು,ಚಮ್ಮಾರರು,ಅಕ್ಕಸಾಲಿಗಳು,ಬಡಗಿಗಳು,ನೇಕಾರರು,ಬೆಲ್ಲದಂತೆ ಮಾತನಾಡುವವರು,ಎಲ್ಲರನ್ನು ಮರಳುಮಾಡುವವರು,ಸೂಳೆ,ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಕಾಯಕ ಮಾಡುತ್ತ ದೇವರನ್ನು ಆದಿಕೇಶವನ್ನು ಮನಮುಟ್ಟುವಂತೆ ಧ್ಯಾನಿಸಬೇಕೆಂದು ಕನಕದಾಸರು ಹೇಳಿದ್ದಾರೆ.’
ಅವರ ಪ್ರಮುಖವಾದ ಸುಳಾದಿ:
‘ಹೆಣ್ಣು ಮಣ್ಣು ಹೊನ್ನು ಮೂರು ನಿನ್ನದೇನಲೋ.ಅನ್ನದಿಂದ ಬರುವ ಕಾಮ ನಿನ್ನದೇನಲೋ
ಕರ್ಣದಿಂದ ಬರುವ ಘೋಷ ನಿನ್ನದೇನಲೋ
ನಿನ್ನ ಬಿಟ್ಟು ಪೋಪ ದೇಹ ನಿನ್ನದೇನಲೋ.
ಕೀರ್ತನೆಗಳಲ್ಲದೆ ಕನಕದಾಸರು ಉಗಭೋಗ,ಸುಳಾದಿ,ಮಂಡಿಗೆಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಪ್ರಮುಖವಾಗಿ
‘ ಸಿರಿ ಕೊಳೆತ ತೆಂಗಿನ ತುರಿ’
‘ವೇದಶಾಸ್ತ್ರ ಕ್ರೂರ ಶಾಸ್ತ್ರ ಗಳನೋದಿ ಕುರಿಕೋಣ ಕಡಿದು ನರಕಕ್ಕೋಗುವರು.’
‘ಸೆಗಣಿಯವನ ಜೊತೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಡುವುದೆ ಲೇಸು.
‘ಜಪವ ಮಾಡಿದರೇನು ತಪವ ಮಾಡಿದರೇನು ಕಪಟಗುಣ ಕಲುಷಿತ ವಿಪರೀತವಿದ್ದವರು’
ಹೀಗೆ ಸಮಾಜದ ಓರೆ ಕೋರೆಗಳನ್ನು ತಿದ್ದಿ ಹೇಳಿದ ಕನಕದಾಸರು ೯೮ ವರ್ಷಗಳ ಕಾಲ ಬಾಳಿಬದುಕಿದ ದಾರ್ಶನಿಕರು.
ತಲ್ಲಣಿಸದಿರು ಕಂಡ್ಯಾ ತಾಳು ಮನವೇ ಎಲ್ಲರನ್ನು ರಕ್ಷಿಸುವನು ಇದಕ್ಕ ಸಂಶಯವಿಲ್ಲ ಆದಿ ಕೇಶವರಾಯ ಮರ,ಗಿಡ,ಪ್ರಾಣಿ,ಪಕ್ಷಿ,ಗಿಳಿ,ನವಿಲು,
ಹವಳ,ಮಾನವನನ್ನು ಕೂಡ ಆದಿಕೇಶವ ರಕ್ಷಿಸುತ್ತಾನೆ, ಕಾಪಾಡುತ್ತಾನೆ. ನಾವೆಲ್ಲ ಅಂಜುವ,ಭಯಪಡುವ ಅಗತ್ಯವಿಲ್ಲ.ಒಳ್ಳೆ ಆದರ್ಶ ಗಳು, ಆಶಾಭಾವನೆಗಳನ್ನಿಟ್ಟುಕೊಂಡು ನಾವೆಲ್ಲಾ ಬದುಕೋಣ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ