Editorial

ಭಕ್ತ ಕನಕದಾಸ (Kanaka Das)

ಕನಕದಾಸರು ಓರ್ವ ಕೀರ್ತನೆಕಾರರಾಗಿ, ಕರ್ನಾಟಕ ಸ೦ಗೀತಕಾರರಾಗಿ, ಕವಿಯಾಗಿ ಹರಿದಾಸ ಪಂಥದ ಪ್ರಚಾರಕರಾಗಿ, ಹೆಸರುವಾಸಿಯಾಗಿದ್ದಾರೆ. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು. ಪುರಂದರದಾಸರ ಸಮಕಾಲೀನರು.ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರೂ ಹೌದು.

ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದವರು. ಕಾಗಿನೆಲೆಯ ಆದಿಕೇಶವರಾಯ ಎಂಬುದು ಇವರ ಕೀರ್ತನೆಗಳ ಅಂಕಿತನಾಮ.

ಕನಕದಾಸನಾದ ತಿಮ್ಮಪ್ಪನಾಯಕ

ಕನಕದಾಸರ ಜನನ ಈಗೀನ ಹಾವೇರಿ ಜಿಲ್ಲೆಯ ಬ೦ಕಾಪುರ ಸಮೀಪದ ಬಾಡ ಗ್ರಾಮ.ಇವರ ತ೦ದೆ. ಬೀರಪ್ಪ, ತಾಯಿ ಬಚ್ಚಮ್ಮ. ಇವರು ಹಾಲು ಮತಕ್ಕೆ ಸೇರಿದವರು. ಅ೦ದರೆ ಇವರು ಜಾತಿಯಿ೦ದ ಕುರುಬರಾಗಿದ್ದರು.ಇವರ ಮಡದಿಯ ಹೆಸರು ಮುಕುತಿ.

ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯದೈವ. ಕನಕದಾಸರ ನಿಜವಾದ ಹೆಸರು ತಿಮ್ಮಪ್ಪನಾಯಕ. ಇವರು ಬ೦ಕಾಪುರದ ಕೋಟೆಯ ಮುಖ್ಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಆಗ ಬ೦ಕಾಪುರ ವಿಜಯನಗರ ಸಾಮ್ರಾಜ್ಯದ ಒ೦ದು ಮುಖ್ಯ ಪಟ್ಟಣವಾಗಿತ್ತು.

ತಿಮ್ಮಪ್ಪನಾಯಕನಿಗೆ ಒ೦ದು ಕೆರೆಯ ಜೀರ್ಣೋದ್ದಾರದ ಕೆಲಸವನ್ನು ವಹಿಸಲಾಗಿತ್ತು. ಆಗ ನೆಲ ಅಗೆಯುವಾಗ ತಿಮ್ಮಪ್ಪನಾಯಕನಿಗೆ ಭಾರೀ ಪ್ರಮಾಣದಲ್ಲಿ ಬ೦ಗಾರ ಸಿಕ್ಕಿತು. ಆಗ ಜನ ತಿಮ್ಮಪ್ಪನಾಯಕನಿಗೆ ಕನಕನಾಯಕ ಎ೦ದು ಕರೆಯಲು ಪ್ರಾರ೦ಭಿಸಿದರು. ಕನಕ ಎ೦ದರೆ ಬ೦ಗಾರ ಎ೦ದರ್ಥ.

ಒಮ್ಮೆ ಕನಕನಾಯಕನಿಗೆ ಒಂದು ಯುದ್ಧದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಎದುರಾಯಿತು. ಆಗಿನ ಕಾಲದಲ್ಲಿ ಯುದ್ಧಗಳು ಸಾಮಾನ್ಯವಾಗಿದ್ದವು. ಕೋಟೆಯ ಮುಖ್ಯ ಕಾವಲುಗಾರನಾಗಿರುವುದರಿ೦ದ ಶತ್ರುಗಳ ಕಣ್ಣು ಅವರ ಮೇಲೆಯೇ ಇತ್ತು. ಆ ಯುದ್ಧದಲ್ಲಿ ಕನಕನಾಯಕನಿಗೆ ದೊಡ್ಡ ಪೆಟ್ಟು ಬಿದ್ದರೂ ಸಹ ಆತ ಪವಾಡವೆ೦ಬಂತೆ ಪ್ರಾಣಾಪಾಯದಿ೦ದ ಪಾರಾಗಿದ್ದು ತನ್ನ ಆರಾಧ್ಯದೈವ ಕಾಗಿನೆಲೆಯ ಆದಿಕೇಶವನ ಆಶೀರ್ವಾದ ಎಂದು, ಆತ ಕೋಟಿ ಕಾವಲಿನ ಕೆಲಸವನ್ನು ಬಿಟ್ಟು ಹರಿದಾಸ ಪ೦ಥ ಸೇರಿಕೊ೦ಡನು. ಅಂದಿನಿ೦ದ ಕನಕನಾಯಕ ಕನಕದಾಸರಾಗಿ ಬದಲಾದನು.

“ನಾನು” ಹೋದರೆ ನಾನು ಹೋಗಬಲ್ಲೆ…

ಕನಕದಾಸರು ದಾಸ ಪ೦ಥದ ಮುಖ್ಯರಾಗಿದ್ದ ವ್ಯಾಸರಾಯರ ಶಿಷ್ಯತ್ವವನ್ನು ಪಡೆದುಕೊ೦ಡರು. ಒಂದು ದಿನ
ವ್ಯಾಸರಾಯರು ತಮ್ಮ ಶಿಷ್ಕರಿಗೆ “ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಲು ಅರ್ಹರಾಗಿದ್ದೀರಿ?” ಎ೦ದು ಕೇಳಿದರು. ಆಗ ಕನಕದಾಸರು “ನಾನು” ಹೋದರೆ ನಾನು ಹೋಗಬಲ್ಲೆ… ಎ೦ದು ಉತ್ತರಿಸಿ ತಮ್ಮ ಗುರುಗಳ ಮೆಚ್ಚುಗೆಯನ್ನು
ಗಳಿಸಿದರು. ಮನುಷ್ಯನಲ್ಲಿರುವ “ನಾನು” ಎ೦ಬ ಅಹ೦ನ್ನು ಬಿಟ್ಟರೆ ಯಾರು ಬೇಕಾದರೂ ಮೋಕ್ಷಕ್ಕೆ ಹೋಗಬಲ್ಲರು
ಎ೦ಬುದು ಅವರ ಅಭಿಮತವಾಗಿತ್ತು.

ಕನಕನ ಕಿ೦ಡಿ

ಗುರುಗಳಾದ ವ್ಯಾಸರಾಯರ ಸಲಹೆಯ ಮೇರೆಗೆ ಕನಕದಾಸರು ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಹೋದರು. ಆದರೆ ಅವರು ಕೆಳ ಜಾತಿಯವರು ಎ೦ಬ ಕಾರಣಕ್ಕೆ ಅಲ್ಲಿದ್ದ ಬ್ರಾಹ್ಮಣರು ಅವರನ್ನು ದೇವಸ್ಥಾನದ ಒಳಗೆ. ಪ್ರವೇಶಿಸದಂತೆ ತಡೆದರು. ಆಗ ಕನಕದಾಸರು ದೇವಸ್ಥಾನದ ಹಿ೦ದುಗಡೆ ನಿ೦ತು ಕೃಷ್ಣನ ಭಜನೆ ಮಾಡಲು ಪ್ರಾರಂಭಿಸಿದರು. ಆಗ ಅವರ ಭಕ್ತಿಗೆ ಮೆಚ್ಚಿ ಸ್ವತಃ ಶ್ರೀಕೃಷ್ಣ ಪರಮಾತ್ಮ ಗೋಡೆ ಒಡೆದು ಕನಕದಾಸರಿಗೆ ದರುಶನ.
ಕೊಟ್ಟನು. ಆಗ ಒಡೆದ ದೇವಸ್ಥಾನದ ಗೋಡೆ ಈಗ ಕನಕನ ಕಿ೦ಡಿ ಎ೦ದು ಹೆಸರುವಾಸಿಯಾಗಿದೆ. ಈಗಲೂ ಸಹ
ಉಡುಪಿಯ ಶ್ರೀಕೃಷ್ಣನ ದೇವಸ್ಥಾನದಲ್ಲಿ ಎಲ್ಲರಿಗೂ ಕನಕನ ಕಿ೦ಡಿಯಿ೦ದಲೇ ದರುಶನ ಭಾಗ್ಯ.

ಕಾಗಿನೆಲೆ ಆದಿಕೇಶವನ ಸನ್ನಿಧಿ

ಕನಕದಾಸರು ಹರಿದಾಸ ಪರ೦ಪರೆಯನ್ನು ಕರುನಾಡಿನಾದ್ಯ೦ತ ಪಸರಿಸಿದರು. ತಮ್ಮ ಕೀರ್ತನೆಗಳಲ್ಲಿ
ಜಾತಿವಾದವನ್ನು, ವರ್ಣಭೇದವನ್ನು, ಮೂಢನಂಬಿಕೆಗಳನ್ನು ಕಟುವಾಗಿ ಖಂಡಿಸಿದರು. ನಳಚರಿತ್ರೆ, ಹರಿ ಭಕ್ತಿಸಾರ,
ನರಸಿ೦ಹಸ್ತವ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಇವು ಕನಕದಾಸರ ಹೆಸರಾ೦ತ ಕೃತಿಗಳಾಗಿವೆ. ಕನಕದಾಸರ
ಕೊನೆಯ ದಿನಗಳ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಅವರು ತಮ್ಮ ಕೊನೆಯ ದಿನಗಳನ್ನು ತಮ್ಮ ಆರಾಧ್ಯದೈವ ಕಾಗಿನೆಲೆ ಆದಿಕೇಶವನ ಸನ್ನಿಧಿಯಲ್ಲಿ ಕಳೆದರು. ಆದಿಕೇಶವನಲ್ಲಿ ಲೀನರಾದರು ಎ೦ಬ ಪ್ರತೀತಿಯಿದೆ.

ಕನಕದಾಸರ ಪದಗಳು

ಪರಮಾತ್ಮನ ಬಗ್ಗೆ ನಂಬಿಕೆಯಿರಲಿ, ಕಷ್ಟ ಬಂದಾಗ ನಿರಾಶರಾಗಬೇಡಿ, ಯಾರನ್ನೂ ಅವನು ಕಾಪಾಡದೇ ಇರುವುದಿಲ್ಲ.

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ 

ಹೆತ್ತವರು, ಮಕ್ಕಳು, ಬಂಧುಗಳು, ಯಜಮಾನ, ರಾಜ, ಅನ್ನ, ರಾಜ್ಯ, ಇವೆಲ್ಲವನ್ನೂ ಬಿಟ್ಟರೂ ಶ್ರೀಹರಿಯ ಪಾದವನ್ನು ಮಾತ್ರ ಎಂದೆಂದೂ ಬಿಡಲಾಗದು, ದೃಡವಾದ ಭಕ್ತಿಯೇ ಮುಕ್ತಿಗೆ ಸೋಪಾನ ಎಂದಿದ್ದಾರೆ ಕನಕದಾಸರು.

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ

84 ಲಕ್ಷ ಯೋನಿಗಳಲ್ಲಿ ಈ ಜೀವ ದಾಟಿ ಬಂದರೂ ಈ ಶರೀರ ತನ್ನದಲ್ಲ , ದೇಹ ನಿತ್ಯವಲ್ಲ, ಎಷ್ಟೇ ನದಿಗಳಲ್ಲಿ ಯಾಂತ್ರಿಕವಾಗಿ ಮಿಂದರೂ ಉಪಯೋಗವಿಲ್ಲ. ಈ ದೇಹವು ಪಿಂಡಾಂಡ ಇದಕ್ಕೆ ಮುಕ್ತಿಗೆ ಶ್ರೀಹರಿಯ ಧ್ಯಾನದಿಂದ ಮಾತ್ರ ಸಾಧ್ಯ. ನಾರಾಯಣ ಅಚ್ಯುತ ಅನಂತ ಕೇಶವ ಸ್ಮರಣೆಯೊಂದೇ ನಮ್ಮ ಸಾಧನೆಗೆ ಹಾದಿ ಎಂದಿದ್ದಾರೆ.

ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವ  ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ
ಆಶೆ ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲ
ಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು 

ಒಮ್ಮೆ ರಾಮಚಂದ್ರ ಆಟವಾಡುತ ಬಾನಲಿ ಚಂದ್ರನ ಕಂಡು ಲೋಕರೀತ್ಯ ತನಗೆ ತಾಯಿ ಕೊಟ್ಟ ಎಲ್ಲಾ ಆಟಿಕೆಗಳನ್ನು ಒಲ್ಲೆನೆಂದು ಚಂದ್ರ ಬೇಕೆಂದು ಹಠ ಹಿಡಿಯಲು, ದಿಕ್ಕು ತೋಚದೇ, ಕೌಸಲ್ಯೆಯು ಚಿಂತಿತಳಾಗಲು, ಮಂತ್ರಿ ಸುಮಂತ್ರನು ರಾಮನ ಕೈಗೆ ಕನ್ನಡಿಯನ್ನಿತ್ತಾಗ ಅಲ್ಲಿ ಚಂದ್ರನ ಬಿಂಬವನ್ನು ನೋಡಿ ತೃಪ್ತನಾದನಂತೆ.

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ 

ಹುಟ್ಟಿದ ಕುಲ ಮುಖ್ಯವಲ್ಲ ಗುಣಮುಖ್ಯ. ಉತ್ತಮ ಗುಣಗಳಿದ್ದರೆ ದೇವರು ಅಂಥವರ ಉದ್ಧಾರ ಮಾಡುತ್ತಾನೆ ಎಂಬುದನ್ನು ಸ್ವ ಅನುಭವದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಮಹಾಮಹಿಮರು ಕನಕದಾಸರು. ಅದನ್ನು ಮಾರ್ಮಿಕವಾಗಿ ನಮ್ಮನ್ನು ಎಚ್ಚರಿಸಿದ ಪರಿಯಿದು.

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ?
ಕುಲಕುಲ ಕುಲವೆನ್ನುತಿಹರೋ
ಕುಲವಾವುದು ಸತ್ಯ ಸುಜನರಿಗೆ

ಕನಕದಾಸರು ರಚಿಸಿದ ಕೀರ್ತನೆಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ್ಯ ಮಾಣಿಕ್ಯಗಳೇ ಸರಿ. ನಿತ್ಯನೂತನತೆಯಿಂದ ಕೂಡಿರುವ ಈ ಕೀರ್ತನೆಗಳು ನಮಗೆ ಮಾರ್ಗದರ್ಶಕಗಳಾಗಿವೆ.

Team Newsnap
Leave a Comment
Share
Published by
Team Newsnap

Recent Posts

ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ

ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More

April 28, 2024

ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More

April 28, 2024

ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ

ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More

April 27, 2024

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ

ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More

April 27, 2024

14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ

ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More

April 27, 2024

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More

April 26, 2024