ನ್ಯೂಸ್ ಸ್ನ್ಯಾಪ್
ಮಂಡ್ಯ
ಪರಿಸರ ಪ್ರೇಮಿ ದಾಸನದೊಡ್ಡಿ ಕಲ್ಮನೆ ಕಾಮೇಗೌಡರು ಕರೋನಾ ಸೋಂಕಿನಿಂದ ಗುಣ ಮುಖರಾಗಿದ್ದಾರೆ. ಆದರೂ ಕೊರೋನಾ ಸೋಂಕಿನ ಕಣ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಸೋಂಕಬಾರದು ಎನ್ನುವ ಕಾರಣಕಾಗಿ ಮನೆಯ ಹಿತ್ತಲಿನಲ್ಲೇ ಆಶ್ರಯ ಪಡೆದು ಕುಟುಂಬದವರ ಆರೋಗ್ಯ ಶ್ರೇಯಸ್ಸಿಗೆ ಕಾರಣರಾಗಿದ್ದಾರೆ. ಗೌಡರ ಮತ್ತೊಂದು ಆದರ್ಶ ಅನುಕರಣೀಯವಾಗಿದೆ.
ಮಳವಳ್ಳಿ ತಾಲೂಕಿನ ಕುಂದನಿ ಬೆಟ್ಟದಲ್ಲಿ 16 ಕಟ್ಟೆಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಜೊತೆಗೆ ಬೆಟ್ಟದ ಕೆಳಭಾಗದಲ್ಲಿನ ಭೂಮಿಗಳಿಗೆ ಅಂತರ್ಜಲ ಸೃಷ್ಠಿ ಮಾಡುವ ಮೂಲಕ ದೇಶದ ಗಮನ ಸೆಳೆದ ಕಾಮೇಗೌಡರ ಸಮಾಜ ಸೇವಾ ಮನೋಭಾವವನ್ನು ಪ್ರಧಾನಿ ಮೋದಿ ಮನ್ – ಕಿ ಮನ್ ಕಿ ಬಾತ್ ಶ್ಲಾಘನೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕಾಮೇಗೌಡರಿಗೆ ಅನಾರೋಗ್ಯ ಕಾಡಿದ ವೇಳೆಯಲ್ಲಿ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆಯಲ್ಲಿ ಕೋವಿಡ್ ಕೂಡ ದೃಢವಾಗಿತ್ತು. ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದರೂ ಕೂಡ ಮನೆಯೊಳಗೆ ಹೋಗದೇ ಹಿತ್ತಲಿನಲ್ಲೇ ವಾಸ ಮಾಡುತ್ತಿದ್ದಾರೆ.
ತಾಡಪಲ್ ಕಟ್ಟಿಕೊಂಡ ಗೌಡರು
ಸೋಂಕು ಮನೆಯಲ್ಲಿರುವ ಮಕ್ಕಳು ಮತ್ತು ಮೊಕ್ಕಳಿಗೆ ತಗುಲಬಾರದು ಎನ್ನುವ ಕಾರಣಕ್ಕಾಗಿ ಗೌಡರು ಮನೆಯ ಪಡಸಾಲೆಯಲ್ಲೂ ವಾಸ ಮಾಡದೇ ಮನೆಯ ಪಾಳು ಬಿದ್ದ ಹಿತ್ತಲಿನಲ್ಲಿ ತಾಡಪಲ್ ಕಟ್ಟಿಕೊಂಡು ಮಂಚ ಹಾಕಿ ಅದರ ಮೇಲೆ ಮಲಗುತ್ತಿದ್ದಾರೆ. ಜೀವ ರಾಶಿ ಗಳಿಗೆ ನೀರುಣಿಸುವ ಗೌಡರು ನನ್ನಿಂದ ಯಾರಿಗೂ ತೊಂದರೆ ಆಗಬಾರದು ಎಂದು ಸ್ವತಃ ಕ್ವಾರಂಟೈನ್ ಮಾರ್ಗವನ್ನು ಕಂಡುಕೊಂಡಿದ್ದಾರೆ.
ತಾವು ಅನಾರೋಗ್ಯಕ್ಕೆ ತುತ್ತಾಗಿದ್ದರೂ ಗಿಡ ಮರಗಳಿಗೆ ನೀರು ಹಾಕುವ, ಪಕ್ಷಿ ಪ್ರಾಣಿಗಳಿಗೆ ಆಹಾರ ನೀಡುವ ತಮ್ಮ ಮನಃ ಸಂತೋಷವನ್ನು ಈಗಲೂ ಮುಂದುವರೆಸಿದ್ದಾರೆ.
ಬಾಕಿ ಉಳಿದಿರುವ ಕಟ್ಟೆಯ ಕೆಲಸ ಮಾಡಬೇಕೆನ್ನುವ ತವಕ ಮಾತ್ರ ಇನ್ನೂ ಇಂಗಿಲ್ಲ. ಕಟ್ಟೆಗಳ ಪಕ್ಕದಲ್ಲಿ ಕೆಲವು ಆಲದ ಮರಗಳನ್ನು ಕಿಡಿಗೇಡಿಗಳು ಉದ್ದೇಶ ಪೂರಕವಾಗಿ ಹಾಳು
ಮಾಡುತ್ತಿರುವ ಕೃತ್ಯ ಗೌಡರ ಬೇಸರವಂತೂ ಇದ್ದೇ ಇದೆ.
ನಾನು ಕರೆ ಕಟ್ಟೆಗಳನ್ನು ಮಾಡಿರುವುದು ಜನರಿಗಾಗಿ ಅಲ್ಲ. ಕಾಡು ಪ್ರಾಣಿ ಪಕ್ಷಿಗಳಿಗಾಗಿ, ಅವುಗಳ ನೀರಿನ ದಾಹ ನೀಗಿಸುವವರು ಯಾರು? ಯಾವುದೇ ಪ್ರಶಸ್ತಿ ಹಣಕ್ಕೆ ಜೋತು
ಬೀಳುವ ಜಾಯಮಾನವೂ ನನ್ನದಲ್ಲ. ಪ್ರಶಸ್ತಿಯಿಂದ ಬಂದ ಹಣವನ್ನೂ ಕೂಡ ನಾನು ಸಮಾಜ ಸೇವೆ ಬಳಕೆ ಮಾಡಿದ್ದೇನೆ. ಕಟ್ಟೆ ಗಳನ್ನು ನಿಮರ್ಾಣ ಮಾಡಿದ್ದೇನೆ. ಜನ ಇದನ್ನೂ ಕೂಡ
ಸ್ವಾರ್ಥ ಎಂದರೆ ನನ್ನ ನಿಸ್ವಾರ್ಥ ಸೇವೆ ಭಗವಂತನಿಗೆ ಗೊತ್ತಿದೆ ಎನ್ನುತ್ತಾರೆ ಕಾಮೇಗೌಡರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ