January 11, 2025

Newsnap Kannada

The World at your finger tips!

kambala

ನವೆಂಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ಕಂಬಳ. ಸಂಪೂರ್ಣ ಮಾಹಿತಿ ಇಲ್ಲಿದೆ.

Spread the love

ಬೆಂಗಳೂರು: ಕರ್ನಾಟಕದ ರಾಜಧಾನಿ ಈ ವಾರಾಂತ್ಯದಲ್ಲಿ ಕರಾವಳಿ ಪ್ರದೇಶದ ಜನಪ್ರಿಯ ಸಾಂಸ್ಕೃತಿಕ ಕ್ರೀಡೆ ‘ಕಂಬಳ’ವನ್ನು ಆಯೋಜಿಸಲು ಸಜ್ಜಾಗುತ್ತಿದೆ ಮತ್ತು ಅದ್ಧೂರಿಯಾಗಿ ನಡೆಸಲು ಸಂಘಟಕರು ಯೋಜಿಸಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ. ಕಂಬಳಕ್ಕೆ ಬರುವ ಕೋಣಗಳನ್ನು ನೋಡುವ ಖುಷಿ ಒಂದೆಡೆಯಾದ್ರೆ ಇತ್ತ ಕಂಬಳ ಮಹೋತ್ಸವದಲ್ಲಿ ಗೆಲ್ಲುವ ಕೋಣಗಳಿಗೆ ಭಾರೀ ಮೊತ್ತದ ನಗದು ಹಾಗೂ ಚಿನ್ನವನ್ನು ನೀಡಲಾಗುತ್ತದೆ.

ಕರಾವಳಿ ಪ್ರದೇಶಗಳಿಂದ ಸುಮಾರು 200 ಜೋಡಿ ಎಮ್ಮೆಗಳು ಮಾಲೀಕರೊಂದಿಗೆ ಇಂದು ಬೆಂಗಳೂರು ತಲುಪುವ ಸಾಧ್ಯತೆ ಇದ್ದು, ನಗರದ ಅರಮನೆ ಮೈದಾನದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರು ಗುರುವಾರ ಪ್ರಾಯೋಗಿಕ ರನ್ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.

ಕಂಬಳ ವಿಜೇತರ ಬಹುಮಾನ: 

ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ ಬಹುಮಾನ:

  1. ಮೊದಲ ಸ್ಥಾನ
    • 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ.
  2. ದ್ವಿತೀಯ ಸ್ಥಾನ
    • 50,000 ರೂ. ಜತೆಗೆ 8 ಗ್ರಾಂ ಚಿನ್ನ
  3. ತೃತೀಯ ಸ್ಥಾನ
    • 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕ

ಬೆಂಗಳೂರು ಕರಾವಳಿ ಕರ್ನಾಟಕದ 18 ಲಕ್ಷ ಜನರಿಗೆ ನೆಲೆಯಾಗಿದೆ. ಅವರಲ್ಲಿ ಸುಮಾರು ಎಂಟು ಲಕ್ಷ ಜನರು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ. ಕಂಬಳದ ವೇಳೆ ಆಹಾರ, ಕಲಾಕೃತಿಗಳು ಮತ್ತು ಇತರ ವಸ್ತುಗಳ 150 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ.

ಕಂಬಳಕ್ಕೆ ಸಾರ್ವಜನಿಕರಿಗೆ ಫ್ರೀ: 

ಎಲ್ಲರೂ ಬಂದು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿ ವ್ಯವಸ್ಥೆಯು ಇರಲಿದೆ. ಸಾರ್ವಜನಿಕರು ಈ ಕಂಬಳಕ್ಕೆ ಬರಲಿದ್ದಾರೆ. ವಿವಿಐಪಿ, ವಿಐಪಿಗೆ ಸೆಪೆರೇಟ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಟಿಕೆಟ್ ಇಲ್ಲ. ಫ್ರೀಯಾಗಿ ಬಂದು ನೋಡಬಹುದು. ಬಂದವರಿಗೆ ಊಟದ ವ್ಯವಸ್ಥೆ ಕೂಡ ಇರಲಿದೆ. ಕುಟುಂಬ ಸಮೇತವಾಗಿ ಬಂದು ವೀಕ್ಷಿಸಬಹುದು.ಸಚಿವ ಜಮೀರ್ ತಂಗಿದ್ದ ಹೊಟೇಲ್ ಮೇಲೆ ಪೊಲೀಸರ ದಾಳಿ

ನ. 24 ರಂದು ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಬಸವರಾಜ್ ಬೊಮ್ಮಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಶಾಸಕರು, ಸಚಿವರುಗಳು ಬರಲಿದ್ದಾರೆ. ಸರ್ಕಾರದಿಂದ ಒಂದು ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ 7 ರಿಂದ 8 ಕೋಟಿ ಖರ್ಚಾಗುತ್ತಿದೆ. ಉಳಿದ ಹಣವನ್ನ ಸಂಘ- ಸಂಸ್ಥೆಗಳಿಂದ ಸಂಗ್ರಹಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!