December 24, 2024

Newsnap Kannada

The World at your finger tips!

kamal biden

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್ ಸೋಂಕು ದೃಢ

Spread the love

ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಕಮಲಾ ಹ್ಯಾರಿಸ್ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು.

ಪಾಸಿಟಿವ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೂ ಅವರು ತನ್ನ ಪ್ರತ್ಯೇಕ ನಿವಾಸದಲ್ಲಿ ವಾಸವಿದ್ದಾರೆ. ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಶ್ವೇತ ಭವನಕ್ಕೆ ಮರಳುತ್ತೇನೆ ಎಂದಿದ್ದಾರೆ.

ಹ್ಯಾರಿಸ್(57) ಅಧಿಕಾರ ವಹಿಸಿಕೊಳ್ಳುವ ಕೆಲ ವಾರಗಳ ಮುನ್ನ ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಅಧಿಕಾರ ಪಡೆದ ನಂತರ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು. 2021ರ ಅಕ್ಟೋಬರ್ ಅಂತ್ಯದಲ್ಲಿ ಬೂಸ್ಟರ್ ಡೋಸ್ ಮತ್ತು ಏಪ್ರಿಲ್ 1 ರಂದು ಹೆಚ್ಚುವರಿ ಬೂಸ್ಟರ್ ಅನ್ನು ಪಡೆದುಕೊಂಡಿದ್ದರು.ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚಿನ ದಿನಗಳಲ್ಲಿ ಹ್ಯಾರಿಸ್‌ನ ಹತ್ತಿರದ ಸಂಪರ್ಕದಲ್ಲಿದ್ದರು ಹೇಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!