February 23, 2026

Newsnap Kannada

The World at your finger tips!

RISHI KUMAR SWAMIJI

ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತ ಕಾಳೀ ಸ್ವಾಮೀಜಿಗೆ ಜೀವ ಬೆದರಿಕೆ

Spread the love

ರಾಸಲೀಲೆ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ‌ನಿಂತಿರುವ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿಗೆ ಜೀವ ಬೆದರಿಕೆ ಕರೆ ಬಂದಿದೆ

ಈ ಕಾರಣಕ್ಕಾಗಿ ಕಾಳೀ ಸ್ವಾಮೀಜಿ ಮಂಗಳವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬಳಿ ರಕ್ಷಣೆ ಕೋರಿದ್ದಾರೆ.

ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿಗೆ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು, ‘ ನೀನು ರಮೇಶ್ ಜಾರಕಿಹೊಳಿ ಪರ ಮಾತನಾಡುತ್ತಿದ್ದೀಯ..ಬರುವ ಅಮವಾಸ್ಯೆಗೆ ನಿನ್ನನ್ನು ಮುಗಿಸುತ್ತೇನೆ ಎಂದು ಅಪರಿಚಿತ ಬೆದರಿಕೆ ಕರೆ ಬಂದಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಈ ಬೆದರಿಕೆ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬಳಿ ಸ್ವಾಮೀಜಿ ರಕ್ಷಣೆ ಕೋರಿದ್ದಾರೆ.

error: Content is protected !!