January 16, 2025

Newsnap Kannada

The World at your finger tips!

product 500x500 1

ಕಲಬುರಗಿಯಲ್ಲೂ ಆ್ಯಕ್ಸಿಜನ್ ಕೊರತೆ: 4 ಮಂದಿ ಸೋಂಕಿತರು ಸಾವು

Spread the love

ಕಲಬುರಗಿಯಲ್ಲೂ ಆಕ್ಸಿಜನ್​ ಕೊರತೆಯಿಂದ 4 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಚಾಮರಾಜನಗರ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಕಲಬುರಗಿಯಲ್ಲೂ ಈ ಘಟನೆ ನಡೆದಿದೆ.

ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು ನಸುಕಿನ ಜಾವ 4 ಗಂಟೆಯಿಂದ ಆಕ್ಸಿಜನ್ ಖಾಲಿಯಾಗಿತ್ತು ಎನ್ನಲಾಗಿದೆ. ಆಕ್ಸಿಜನ್ ಮೇಲೆ ಅವಲಂಬಿತರಾದ ಇತರರಿಗೂ 7 ಗಂಟೆಯಿಂದ ಆಕ್ಸಿಜನ್ ಸರಬರಾಜು ಸ್ಥಗಿತವಾಗಿದೆ. ಪರಿಣಾಮ ಮತ್ತಷ್ಟು ರೋಗಿಗಳು ಕ್ಷಣ ಕ್ಷಣಕ್ಕೂ ಗಂಭೀರ ಪರಿಸ್ಥಿತಿಗೆ ಜಾರುತ್ತಿದ್ದಾರೆ.

ಡಿಸ್ಚಾರ್ಜ್ ಮಾಡಿಕೊಂಡು ಬೇರೆಡೆ ಹೋಗೋಣ ಅಂದರೂ ಬೇರೆಲ್ಲೂ ಆಕ್ಸಿಜನ್ ಬೆಡ್ ಖಾಲಿ ಇಲ್ಲ. ಇದರಿಂದ ಸೋಂಕಿತರು ಮತ್ತು ಅವರ ಸಂಬಂಧಿಕರ ಗೋಳಾಟ ಹೆಚ್ಚಾಗಿದೆ.

Join WhatsApp group of Newsnap Kannada —

https://chat.whatsapp.com/CCR8jY9CI6HGUbm5jWYjSe

Copyright © All rights reserved Newsnap | Newsever by AF themes.
error: Content is protected !!