December 19, 2024

Newsnap Kannada

The World at your finger tips!

water ,kabini,riveroverflow

ಕಬಿನಿ 35 ಸಾವಿರ ಕ್ಯೂಸೆಕ್ ಅಧಿಕ ನೀರು ನದಿಗೆ – ನಂಜನಗೂಡಿನಲ್ಲಿ ಪ್ರವಾಹ

Spread the love

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಜಲಾಶಯದಿಂದ 35 ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಪರಿಣಾಮ ಕಪಿಲಾ ನದಿ ತುಂಬಿ ಹರಿಯುತ್ತಿದೆ. ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಭಾರೀ ಮಳೆಗೆ ನಂಜನಗೂಡಿನ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹದಿನಾರು ಕಾಲು ಮಂಟಪ ಬಹುತೇಕ ಮುಳುಗಡೆಯಾಗಿದೆ. ಹೀಗಾಗಿ ಭಕ್ತರಿಗೆ ಸ್ನಾನಘಟ್ಟದಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ.ಇದನ್ನು ಓದಿ –ಕೇರಳದ ಕಣ್ಣೂರಿನ RSS ಕಚೇರಿ ಮೇಲೆ ಬಾಂಬ್ ದಾಳಿ: ಕಿಟಕಿ ಗಾಜು ಪುಡಿ ಪುಡಿ

ಇನ್ನೂ ಎರಡು ದಿನ ಇದೇ ಪ್ರಮಾಣದಲ್ಲಿ ನೀರಿನ ಹೊರ ಹರಿವು ಇದ್ದರೆ, ನಂಜನಗೂಡಿನ ಬಹುತೇಕ ತಗ್ಗು ಪ್ರದೇಶಗಳ ಮನೆಗಳು ಮುಳುಗಡೆಯಾಗುವುದು ನಿಶ್ಚಿತವಾಗಿದೆ.

ಪರಶುರಾಮ ದೇವಸ್ಥಾನ ಮುಳುಗಡೆ:

ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಡುತ್ತಿರುವ ಕಾರಣ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ನಂಜನಗೂಡು ಪಟ್ಟಣದ ಹೊರ ವಲಯದಲ್ಲಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಪರಶುರಾಮ ದೇವರಿಗೆ ಜಲದಿಗ್ಭಂಧನ ಸೃಷ್ಟಿಯಾಗಿದೆ ನೀರಿನ ಪ್ರಮಾಣ ತಗ್ಗುವವರೆಗೂ ದೇವರಿಗೆ ಪೂಜೆ ಇಲ್ಲ.

Copyright © All rights reserved Newsnap | Newsever by AF themes.
error: Content is protected !!