January 4, 2025

Newsnap Kannada

The World at your finger tips!

WhatsApp Image 2022 05 24 at 9.31.57 AM

ಅಂತರ್ ರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ಕುಮಾರ್ ನಿಧನ

Spread the love

ಸಿನಿಮಾ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ಕುಮಾರ್ (56) ಹೃದಯಾಘಾತದಿಂದ ನಿಧನರಾದರು.

ರಂಗಭೂಮಿ ಹಿನ್ನೆಲೆಯಿಂದ ಬಂದ ಮೋಹನ್ ಕುಮಾರ್‌ ಅವರು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ‘ಜಾನಪದ’ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ಪ್ರವೇಶಿಸಿ ಜನಪ್ರಿಯತೆ ಗಳಿಸಿದ್ದರು. ಮೂಲತಃ ಎಂಜಿನಿಯರ್‌ ಆದ ಇವರು ರಂಗಭೂಮಿ, ಧಾರಾವಾಹಿ, ಪತ್ರಿಕೋದ್ಯಮ, ಪ್ರಕಾಶನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು. ‘ಮೈಸೂರು ಮಲ್ಲಿಗೆ’ ಸಿನಿಮಾದ ನಾಯಕನಿಗೆ ಕಂಠದಾನ ಮಾಡಿದ್ದರು.

ಪತ್ನಿ ವತ್ಸಲಾ ಮೋಹನ್ ಅವರ ‘ಸಜ್ಜಾದನಾ ಗಣೇಶ’ ಕಾದಂಬರಿ ಆಧರಿಸಿ 2016ರಲ್ಲಿ ‘ಬೊಂಬೆಯಾಟ’ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರಷ್ಯಾದ ಮಾಸ್ಕೊದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಸಿನಿಮಾ ‘ಬೊಂಬೆಯಾಟ’ ಎಂಬುದು ಇದರ ಹೆಗ್ಗಳಿಕೆ.

ಮೃತರು ತಾಯಿ ಕಮಲಮ್ಮ, ಕಲಾವಿದೆಯಾದ ಪತ್ನಿ ವತ್ಸಲಾ ಮೋಹನ್‌, ಪುತ್ರಿ ನಟಿ ಅನನ್ಯಾ ಮೋಹನ್‌ ಅವರನ್ನು ಅಗಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!