ನನ್ನ ಹೆಂಡತಿಯನ್ನು ಅಪಹರಿಸಿ, ಆಸ್ತಿಯನ್ನು ಬರೆಸಿಕೊಳ್ಳಲಾಗಿದೆ ಎಂದು ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.
ಕೆ ಕಲ್ಯಾಣ್ ಬೆಳಗಾವಿಯಲ್ಲಿ ತುರ್ತು ಗೋಷ್ಠಿ ಯಲ್ಲಿ ಮಾತನಾಡಿ,
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಒಬ್ಬ ವ್ಯಕ್ತಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆಪಡೆದುಕೊಂಡಿದ್ದಾರೆ ಎಂದು ಕಲ್ಯಾಣ ವಿವರಿಸಿದರು.
ಕಳೆದ ಜನವರಿಯಿಂದ ನಾನು ಸುಳಿಯಲ್ಲಿ ಸಿಲುಕಿಕೊಂಡಿದ್ದೇನೆ. ನಾನು ನನ್ನ, ಪತ್ನಿ ತುಂಬಾ ಚೆನ್ನಾಗಿ ಇದ್ದೇವೆ. ಮೂರನೇ ವ್ಯಕ್ತಿ ಗಳಿಂದ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ ಎಂದು ವಿವರಿಸಿದರು.
ಕೆ. ಕಲ್ಯಾಣ್ ಹೆಂಡತಿಯನ್ನೂ ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ತಮ್ಮ ಅನೇಕ ವಿಭಿನ್ನ ಗೀತೆಗಳ ಮೂಲಕವೇ
ಕೆ ಕಲ್ಯಾಣ್ ಮನೆ ಮಾತಾಗಿದ್ದಾರೆ. ಇದೀಗ ಕೆ ಕಲ್ಯಾಣ್ ಕೌಟಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಪೋಲಿಸರಿಗೆ ದೂರು
ಸೆಪ್ಟೆಂಬರ್ 30ರಂದು ಕೆ ಕಲ್ಯಾಣ ಬೆಳಗಾವಿ ಮಾಳ ಮಾರುತಿ ಪೊಲೀಸ್ ಠಾಣೆಗೆ ಒಂದು ದೂರು ನೀಡಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಮಂತ್ರವಾದಿ ಶಿವಾನಂದ ವಾಲಿ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಅಪಹರಣ ಮಾಡಿದ್ದಾರೆ. ಅಷ್ಟೇ ಅಲ್ಲ ಮಂತ್ರ, ತಂತ್ರದ ಮೂಲಕ ಆಸ್ತಿಯನ್ನು ಸಹ ಬರೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಲಂ 365,420, 363 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಮಹಾಂತೇಶ ನಗರದ ಶಿವತೀರ್ಥ ಅಪಾರ್ಟ್ಮೆಂಟ್ ನಲ್ಲಿ ತಂದೆ ತಾಯಿಯ ಜತೆಗೆ ಕೆ ಕಲ್ಯಾಣ್ ಪತ್ನಿ ಅಶ್ವಿನಿ ವಾಸವಾಗಿದ್ದಾರೆ. ಶನಿವಾರ ಠಾಣೆಗೆ ಅಶ್ವಿನಿಯವರನ್ನು ಕರೆಸಿದ ಪೊಲೀಸರು, ಈ ಬಗ್ಗೆ 4 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಶಿವಾನಂದ ವಾಲಿಯನ್ನು ಮಾಳ ಮಾರುತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ಆರಂಭಿಸಿದ್ದಾರೆ. ಪೊಲೀಸ್ ವಿಚಾರಣೆಯ ನಂತರ ಮಾತನಾಡಿದ ಅಶ್ವಿನಿ, ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿ ಇದೆ. ಈಗಲೇ ಏನು ಹೇಳಲ್ಲ ಎಂದರು. ಭಾನುವಾರ ಕೌನ್ಸಲಿಂಗ್ ಮುಗಿದ ಬಳಿಕ ಎಲ್ಲಾ ವಿಚಾರವನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಸಾಹಿತಿ ಕೆ ಕಲ್ಯಾಣ ಸಹ ಈ ಬಗ್ಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ನನ್ನ ಹೆಂಡತಿ ಅಶ್ವಿನಿ ನನ್ನ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಕೋರ್ಟ್ ನಲ್ಲಿ ವಿಚಾರಣೆ ಬಳಿಕ ತಿಳಿಯಲಿದೆ. ಅಲ್ಲಿಯವರೆಗೆ ಇಂತಹ ಸುದ್ದಿಯನ್ನು ಪ್ರಕಟ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಲಿ ಎಂದು ಕೆ. ಕಲ್ಯಾಣ್ ಹೇಳಿದ್ದಾರೆ.
ಜೀವನದಲ್ಲಿ ಪರಿಶ್ರಮ ಮತ್ತು ನಿಷ್ಠೆಯಿಂದ ಮುಂದೆ ಬಂದಿದ್ದೇನೆ. ಯಾರಾದರೂ ವೈಯಕ್ತಿಕ ತೇಜೋವಧೆ ಮಾಡಿದ್ರೆ ಸುಮ್ಮನೆ ಇರಲ್ಲ. ಕಾನೂನು ಮೂಲಕ ಕ್ರಮ ಜರುಗಿಸುತ್ತೇನೆ ಎಂಬ ಎಚ್ಚರಿಕೆಯನ್ನೂ ಸಹ ಸಾಹಿತಿ ಕೆ ಕಲ್ಯಾಣ ನೀಡಿದ್ದಾರೆ.
ಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಹೆಂಡತಿಯ ಕೌನ್ಸಲಿಂಗ್ ಬಳಿಕ ಯಾವ ವಿಚಾರ ಗೊತ್ತಾಗಲಿದೆ ಎಂಬುದು ಕಾದು ನೋಡಬೇಕು
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ