ನಿನ್ನೆ ಬೆಳಿಗ್ಗೆ 11:07ಕ್ಕೆ ಮೇಘನಾ ಹಾಗೂ ದಿ.ಚಿರು ಪುತ್ರ ಜನ್ಮತಾಳಿದೆ. ಈ ಮಗುವು ಗಜ ಕೇಸರಿ ಯೋಗದಲ್ಲಿ ಜನ್ಮ ತಾಳಿದ್ದು ಹಲವು ವಿಶೇಷ ಯೋಗಗಳನ್ನು ಹೊಂದಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಮಗು ಜನಿಸಿದ ಸಮಯವನ್ನು ಅಪೂರ್ವ ಘಳಿಗೆ ಎಂದಿರುವ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ‘ಮಗುವಿನ ಜಾತಕದಲ್ಲಿ ಗಜಕೇಸರಿ ಯೋಗ, ಬುಧಾದಿತ್ಯ ಯೋಗ, ಶಶಯೋಗ, ಹಂಸಯೋಗಗಳಂತಹ ವಿಶೇಷ ಯೋಗಗಳನ್ನು ಮಗು ಹೊಂದಿದೆ. ಆದರೆ ಜನನದ ಸಮಯದಲ್ಲಿ ಮಂಗಳನು ವಕ್ರ ದೃಷ್ಠಿ ಬೀರಿದ್ದಾನೆ. ಹಾಗಾಗಿ ಮಗುವಿನ ಜಾತಕದಲ್ಲಿರುವ ಮಂಗಳ ದೋಷವನ್ನು ನಿವಾರಿಸಿಕೊಳ್ಳಬೇಕು’ ಎಂದಿದ್ದಾರೆ.
ಇತ್ತ ಮಗುವಿನ ಜನನದ ಸುದ್ದಿ ಕೇಳುತ್ತಲೇ ನಟ ಅರ್ಜುನ್ ಸರ್ಜಾ ಓಡೋಡಿ ಬಂದಿದ್ದಾರೆ. ‘ಮೂವತ್ತಾರು ವರ್ಷಗಳ ಹಿಂದೆ ಹೀಗೆ ಚಿರು ಹುಟ್ಟಿದಾಗ ಅವನನ್ನು ನೋಡಲು ಓಡೋಡಿ ಬಂದಿದ್ದೆ. ಚಿರು ಇದ್ದಿದ್ದರೆ ಈ ಕ್ಷಣವನ್ನು ತುಂಬಾ ಸಂತಸದಿಂದ ಅನುಭವಿಸುತ್ತಿದ್ದ. ಅವನ ಅಗಲಿಕೆಯಿಂದ ನಾಲ್ಕು ತಿಂಗಳವರೆಗೂ ನಮ್ಮ ಮನೆಯಲ್ಲಿ ಸಂತಸವಿರಲಿಲ್ಲ. ಈಗ ಅವನ ಪುತ್ರನ ಆಗಮನದಿಂದ ನಮ್ಮ ಕುಟುಂಬಸ್ಥರಲ್ಲಿ ನಗು ಕಂಡೆ’ ಎಂದು ಖುಷಿಯನ್ನು ಹಂಚಿಕೊಂಡರು.
More Stories
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ