ಮುಂಬೈ: ಜಾಮೀನು ನೀಡಲು 5 ಲಕ್ಷ ರೂ. ಲಂಚ ಕೇಳಿದ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಂ ಮತ್ತು ಇತರ ಮೂವರು ಬಂಧಿತರಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಧೀಶ ಧನಂಜಯ್ ನಿಕಂ ಪರವಾಗಿ ಕಿಶೋರ್ ಖರತ್ ಮತ್ತು ಆನಂದ್ ಖರತ್ ಎಂಬವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯ ತಂದೆಯವರ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ತಡೆ ಹಿಡಿದು, ಖಾಸಗಿ ವ್ಯಕ್ತಿಗಳ ಮೂಲಕ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸರು ಸತಾರಾ ಹೋಟೆಲ್‌ನಲ್ಲಿ ಬಲೆ ಬೀಸಿ ನ್ಯಾಯಾಧೀಶರನ್ನು ಲಂಚ ಸ್ವೀಕರಿಸುವ ಸಮಯದಲ್ಲಿಯೇ ಹಿಡಿದಿದ್ದಾರೆ.ಇದನ್ನು ಓದಿ – ತಡರಾತ್ರಿ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಜಾಗತಿಕವಾಗಿ ಡೌನ್: ಬಳಕೆದಾರರ ಪರದಾಟ!
ಈ ಘಟನೆ ಬಳಿಕ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಸತಾರಾ ನ್ಯಾಯಾಲಯದ ಆವರಣದಲ್ಲಿಯೇ ಈ ಘಟನೆ ನಡೆದಿದ್ದು, ಗಮನ ಸೆಳೆದಿದೆ.
More Stories
ಕೆಪಿಎಸ್ಸಿಯಿಂದ ಮತ್ತೊಂದು ಎಡವಟ್ಟು: ಪಿಡಿಒ ನೇಮಕಾತಿ ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಫೋಟೋ ವೈರಲ್!
ಭಾರತೀಯ ಆಹಾರ ನಿಗಮದಲ್ಲಿ 33,566 ಹುದ್ದೆಗಳಿಗೆ ನೇಮಕಾತಿ
ಬೆಂಗಳೂರಿನಲ್ಲಿ ತಾಯಿಯು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣು!