ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾದ್ಯಮ ಸಲಹೆಗಾರ, ಪತ್ರಕರ್ತ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲವಾಗಿದ್ದ ಚನ್ನಪಟ್ಟಣದ ಕೆ ಸಿ ಸದಾನಂದ, ಸಂಜೆವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರ ನಂಬಿಕಸ್ಥನಾಗಿದ್ದ ಸದಾನಂದ, ಈಗಲೂ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಸಂತಾಪ:
ಕೆ.ಸಿ.ಸದಾನಂದ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸದಾ ಕ್ರೀಯಾಶೀಲರಾಗಿದ್ದ ಆತ್ಮೀಯ ಪತ್ರಕರ್ತ ಗೆಳೆಯನನ್ನು ಇಷ್ಟು ಬೇಗ ಕಳೆದುಕೊಂಡಿದ್ದು ನೋವಿನ ಸಂಗತಿ ಎಂದಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
- ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ
- ಸಂಕ್ರಾಂತಿ….
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ