ದೇಶದ ಮಾಹಿತಿಗಳನ್ನು ಕದ್ದು ನೆರೆ ರಾಷ್ಟ್ರ ಚೀನಾಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಪತ್ರಕರ್ತ ರಾಜೀವ್ ಶರ್ಮಾ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಂಸ್ಥಾಪಕ ನಿರ್ದೇಶಕರಾಗಿರುವ ಥಿಂಕ್ ಟ್ಯಾಂಕ್ ಸಂಸ್ಥೆಯ ‘ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್’ ನಲ್ಲಿ ಶರ್ಮ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್ (ವಿಐಎಫ್) ನಲ್ಲಿ ದೇಶದ ಅನೇಕ ಘಟಾನುಗಟಿಗಳೇ ಆಡಳಿತ ಸಂಸ್ಥೆಯ ಟ್ರಸ್ಟಿಗಳಾಗಿದ್ದಾರೆ. ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್, ಪ್ರಸಾರ ಭಾರತಿ ಮುಖ್ಯಸ್ಥ ಮತ್ತು ಕನ್ನಡಿಗ ಅರಕಲಗೋಡು ಸೂರ್ಯಪ್ರಕಾಶ್ ಮತ್ತಿತರ ಹಲವು ಪ್ರಮುಖರು ಇದ್ದಾರೆ. ಅಲ್ಲದೆ, ಅದರ ಕಾರ್ಯಕಾರಿ ಮಂಡಳಿಯಲ್ಲಿ ಆರ್ ಎಸ್ ಎಸ್ ಆರ್ಥಿಕ ತಜ್ಞ ಹಾಗೂ ರಿಸರ್ವ್ ಬ್ಯಾಂಕ್ ನಿರ್ದೇಶಕ ಎಸ್ ಗುರುಮೂರ್ತಿಯವರೂ ಇದ್ದು, ಸದ್ಯ ಟ್ರಸ್ಟಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
ಡಿ ಆರ್ ಡಿ ಮಾಜಿ ಮುಖ್ಯಸ್ಥ ಹಾಗೂ ಹಾಲಿ ನೀತಿ ಆಯೋಗದ ಸದಸ್ಯ ವಿ ಕೆ ಸಾರಸ್ವತ್, ರಾ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಸಿ ಡಿ ಸಹಾಯ್ ಇವರೆಲ್ಲರೂ ಥಿಂಕ್ ಟ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು. ಥಿಂಕ್ ಟ್ಯಾಂಕ್ ಸಂಸ್ಥೆಯು ಬಿಜೆಪಿಯ ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಪ್ರಮುಖವಾಗಿ ಭಾರತದ ಅಂತಾರಾಷ್ಟ್ರೀಯ ಸಂಬಂಧಗಳು, ರಾಜತಾಂತ್ರಿಕ ಬಿಕ್ಕಟ್ಟುಗಳು, ನೆರೆಹೊರೆಯ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧ ಮುಂತಾದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಸಂಬಂಧಗಳ ಕುರಿತ ಅಧ್ಯಯನಕ್ಕಾಗಿ ಹೆಸರಾಗಿರುವ ಈ ಸಂಸ್ಥೆಯಲ್ಲಿ ಶರ್ಮಾ ಅವರಂಥಹವರೂ ಕೆಲಸ ನಾಡಿರುವುದು ಈಗ ಬಯಲಿಗೆ ಬಂದಿದೆ. ಶರಾ ಬಂಧನದ ಸುದ್ದಿ ತಿಳಿದ ಬೆನ್ನಲ್ಲೇ ವಿಐಎಫ್ ತನ್ನ ತನ್ನ ವೆಬ್ ಸೈಟಿನಲ್ಲಿದ್ದ ವಿಐಎಫ್ ಟೀಮ್ ಎಂಬ ಪುಟವನ್ನು ಅಳಿಸಿ ಹಾಕಿದೆ.
ಶರ್ಮಾ ಅವರಿಗೆ, ಬಹಳಷ್ಟು ಪೂರ್ವಾಪರ ತನಿಖೆ ಮಾಡಿ ನೀಡಲಾಗುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) ಯ ಮಾನ್ಯತಾ ಪತ್ರವನ್ನೂ ನೀಡಲಾಗಿದೆ ಎಂಬುದು ಆಶ್ಚರ್ಯದ ವಿಷಯವೇ. ಅಲ್ಲದೇ ಶರ್ಮಾ ಭಾರತೀಯ ಪ್ರೆಸ್ ಕ್ಲಬ್ ಸದಸ್ಯ. ಇಷ್ಟೆಲ್ಲಾ ಸವಲತ್ತುಗಳನ್ನು ಪಡೆದಿದ್ದರೂ ಅವರು ಇಂಥ ಕೆಲಸಕ್ಕೆ ಏಕೆ ಕೈ ಹಾಕಿದರು ಎಂಬ ಪ್ರಶ್ನೆಯ ಜೊತೆ, ರಾಷ್ಟ್ರ ಮಟ್ಟದ ಉನ್ನತಾಧಿಕಾರಿಗಳು ಇದ್ದೂ ಶರ್ಮಾ ಅವರ ಬಗೆಗೆ ಸಂಪೂರ್ಣವಾಗಿ ತನಿಖೆ ಮಾಡದೇ ಆತನನ್ನು ಹೇಗೆ ವಿಐಎಫ್ ನ ಸಂಪಾದಕನನ್ನಾಗಿ ಮಾಡಿದರು ಎಂಬ ಸಂಶಯಗಳು ಕಾಡದೇ ಇರದು.
ಈ ನಡುವೆ, ಸ್ವತಃ ದೆಹಲಿಯ ಭಾರತೀಯ ಪ್ರೆಸ್ ಕ್ಲಬ್ ಈ ಆರೋಪ ಮಾಡಿದೆ. ಶರ್ಮಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಹಿಂದೆ ‘ದೊಡ್ಡ ವ್ಯಕ್ತಿಗಳ ಕೈವಾಡ’ವಿದೆ ಮತ್ತು ತೀರಾ ‘ಆಘಾತಕಾರಿ’ ಬೆಳವಣಿಗೆ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ. “ದೆಹಲಿ ಪೊಲೀಸರು ಇಂತಹ ಕಳಂಕಿತ ಕೃತ್ಯಗಳಿಗಾಗಿ ಕುಕ್ ಯಾಗಿ ಗಳಿಸಿದ್ದಾರೆ. ಜನಪ್ರಿಯ ಸ್ವತಂತ್ರ ಪತ್ರಕರ್ತ ಹಾಗೂ ತನ್ನ ಹಿರಿಯ ಸದಸ್ಯ ರಾಜೀವ್ ಶರ್ಮಾ ಅವರ ಬಂಧನದ ವಿರುದ್ಧ ಕಟುವಾಗಿ ಪ್ರತಿಕ್ರಿಯೆ ನೀಡಿದೆ.
ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ಯಾವುದೇ ಪಕ್ಷಪಾತವನ್ನು ಮಾಡದೇ ತನಿಖೆ ಮಾಡಿದಾಗ ಮಾತ್ರ ಪ್ರಕರಣ ಸಂಬಂಧಿತ ಒಳಗುಟ್ಟುಗಳು ಗೊತ್ತಾಗಲು ಸಾಧ್ಯ.
More Stories
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ