December 18, 2024

Newsnap Kannada

The World at your finger tips!

job , SBI , application

SBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ: ತಿಂಗಳಿಗೆ 78 ಸಾವಿರರು – ಮಾಹಿತಿಗೆ ಸುದ್ದಿ ಓದಿ

Spread the love

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸದ್ಯಕ್ಕೆ ಖಾಲಿ ಇರುವ ಪೋಸ್ಟ್ ಗಳಾದ ರಿಟೇಲ್ ಪ್ರಾಡಕ್ಟ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಎಜುಕೇಶನ್ ಸಿಬ್ಬಂದಿ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಸ್ಟಾಟಿಸ್ಟಿಕ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಶೈಕ್ಷಣಿಕ ವಿದ್ಯಾರ್ಹತೆ ಈ ರೀತಿಯಾಗಿ ಕೇಳಲಾಗಿದೆ. ಮ್ಯಾನೇಜರ್ (ರಿಟೇಲ್ ಪ್ರಾಡಕ್ಟ್) ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಬಿಎ ಜೊತೆಗೆ ಪಿಜಿಡಿಎಂ ಅಥವಾ ಪಿಜಿಪಿಎಂ ಉತ್ತಿರ್ಣರಾಗಿರಬೇಕು. ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ 63840 ರಿಂದ 78230 ರೂ ಸಿಗಲಿದೆ, ಮತ್ತು ವಯೋಮಿತಿ ಈ ರೀತಿ ನಿಗದಿ ಆಗಿದೆ ಕನಿಷ್ಠ 28 ವರ್ಷ ಹಾಗೂ ಗರಿಷ್ಠ 38 ವರ್ಷ ಆಗಿರಬೇಕು .

ಸಿಬ್ಬಂದಿ (ಎಕ್ಸಿಕ್ಯೂಟಿವ್ ಎಜುಕೇಶನ್) ಹುದ್ದೆಗೆ ಶೈಕ್ಷಣಿಕ ಅರ್ಹತೆ ಅಂಬಿಗೆ ಪೋಸ್ಟ್ ಗ್ರಾಜುಯೇಷನ್ ಅಥವಾ ಪಿ ಎಚ್ ಡಿ ಎಂದು ನಿಗದಿಯಾಗಿದೆ ಇದಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವಾರ್ಷಿಕ ವೇತನವಾಗಿ 25 ಲಕ್ಷದಿಂದ 40 ಲಕ್ಷ ಸಿಗಲಿದೆ, ವಯೋಮಿತಿಯು ಕನಿಷ್ಠ 28 ವರ್ಷ ಗರಿಷ್ಠ 55 ವರ್ಷ. ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟಾಟಿಸ್ಟಿಕ್ಸ್) ಇವರ ಶೈಕ್ಷಣಿಕ ವಿದ್ಯಾರ್ಹತೆಯು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ ಟೆಕ್ ಮಾಡಿರಬೇಕು. ಅಥವಾ ಐಟಿ ಅಥವಾ ಪೋಸ್ಟ್ ಗ್ರಾಜುಯೇಷನ್. ಇವರಿಗೆ ನಿಗದಿ ಆಗಿರುವ ವೇತನವು ವಾರ್ಷಿಕವಾಗಿ 15 ಲಕ್ಷದಿಂದ 20 ಲಕ್ಷ ರೂ ಆಗಿದೆ. ಇವರ ವಯೋಮಿತಿ ಈ ರೀತಿ ನಿಗದಿ ಆಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 25 ವರ್ಷ ಹಾಗೂ ಗರಿಷ್ಠ 35 ವರ್ಷದ ಒಳಗೆ ಇರಬೇಕು.

ಎಸ್ಸಿ ಎಸ್ಟಿ ಮತ್ತು ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಅದನ್ನು ಹೊರತುಪಡಿಸಿ ಉಳಿದ ಎಲ್ಲಾ ಜನರಲ್ , ಇ ಡಬ್ಲ್ಯೂ ಎಸ್ ಮತ್ತು ಒಬಿಸಿ ಅಭ್ಯರ್ಥಿಗಳು 750ಗಳನ್ನು ಅರ್ಜಿ ಶುಲ್ಕವಾಗಿ ಕಟ್ಟಬೇಕಾಗಿದೆ.

ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಲು ಕೋರಲಾಗಿದ್ದು, ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈಗಾಗಲೇ ಈ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭ ಆಗಿದ್ದು 23 ಫೆಬ್ರವರಿ 2023 ರಿಂದಲೇ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2023 ಆಗಿರುತ್ತದೆ.

ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಇನ್ನು ಹೆಚ್ಚಿನ ಮಾಹಿತಿ ತಿಳಿಯಿರಿ.

ಅಧಿಕೃತ ವೆಬ್ಸೈಟ್: sbi.co.in ಇದನ್ನು ಓದಿ –ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

#SBI #SBI_Bank #JobAlert #JobApplication #india #News #SBI_jobs #Bank_job #latestnews

Copyright © All rights reserved Newsnap | Newsever by AF themes.
error: Content is protected !!