JOB

Job Alert : ಕೇಂದ್ರ ಸರ್ಕಾರದಿಂದ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ SSC CGL ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು , ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 24 ರಿಂದ ಜುಲೈ 24 ರವರೆಗೆ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ 2024 ಗೆ ಅರ್ಜಿ ಸಲ್ಲಿಸಬಹುದು.

ಜುಲೈ 25 ಅರ್ಜಿ ಶುಲ್ಕ ಪಾವತಿಸಲು ದಿನವಾಗಿದ್ದು ,ಅರ್ಜಿ ತಿದ್ದುಪಡಿಗಾಗಿ ವಿಂಡೋ ಆಗಸ್ಟ್ 10 ಮತ್ತು 11 ರಂದು ತೆರೆದಿರುತ್ತದೆ.

ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 17727 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಎಸ್‌ಎಸ್ಸಿ ಸಿಜಿಎಲ್ ರಾಷ್ಟ್ರಮಟ್ಟದ ಪರೀಕ್ಷೆಯಾಗಿದ್ದು, ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಇನ್ಸ್ಪೆಕ್ಟರ್ (ಪರೀಕ್ಷಕ), ಸಬ್ ಇನ್ಸ್ಪೆಕ್ಟರ್, ಸಹಾಯಕ ಸೆಕ್ಷನ್ ಆಫೀಸರ್ ಮತ್ತು ಹೆಚ್ಚಿನ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿಗಾಗಿ ನಡೆಸಲಾಗುತ್ತದೆ.

ಎಸ್‌ಎಸ್ಸಿ ಸಿಜಿಎಲ್ 2024 ಅಧಿಸೂಚನೆ ಪ್ರಕಟ :

17727 ಹುದ್ದೆಗಳಿಗೆ ಎಸ್‌ಎಸ್ಸಿ ಸಿಜಿಎಲ್ ಅಧಿಸೂಚನೆ 2024 ಪಿಡಿಎಫ್ ಅನ್ನು ssc.gov.in ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು , 18 ರಿಂದ 32 ವರ್ಷದೊಳಗಿನ ಪದವೀಧರರು ಜುಲೈ 24 ರವರೆಗೆ ಅರ್ಜಿ ಸಲ್ಲಿಸಬಹುದು.

ಜುಲೈ 25 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿದ್ದು , ಅಭ್ಯರ್ಥಿಗಳನ್ನು ಶ್ರೇಣಿ 1 ಮತ್ತು ಶ್ರೇಣಿ 2 ರಲ್ಲಿ ಅವರ ಒಟ್ಟು ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಎಸ್‌ಎಸ್ಸಿ ಸಿಜಿಎಲ್ 2024 :

ವಿವಿಧ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲು ಎಸ್‌ಎಸ್ಸಿ ಸಿಜಿಎಲ್ ಪರೀಕ್ಷೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್, ಇನ್ಸ್ಪೆಕ್ಟರ್ (ಪರೀಕ್ಷಕ), ಸಬ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಜಾರಿ ಆಫೀಸರ್, ಡಿವಿಜನಲ್ ಅಕೌಂಟೆಂಟ್, ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಷನ್ ಕ್ಲರ್ಕ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್, ಅಕೌಂಟೆಂಟ್/ಜೂನಿಯರ್ ಅಕೌಂಟೆಂಟ್, ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ ಮತ್ತು ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಗ್ರೇಡ್-2 ಹುದ್ದೆಗಳು ಖಾಲಿ ಇವೆ.

ವಯಸ್ಸಿನ ಅರ್ಹತೆ :

ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಹುದ್ದೆಗಳ ಆಧಾರದಲ್ಲಿ 27 ರಿಂದ 32 ವರ್ಷದ ವರೆಗೆ ನಿಗದಿಪಡಿಸಲಾಗಿರುತ್ತದೆ. ಅರ್ಜಿ ಹಾಕಲು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂ ಅಭ್ಯರ್ಥಿಗಳಿಗೆ 10 ವರ್ಷದಂತೆ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯಿಸುತ್ತದೆ.

ವಿದ್ಯಾರ್ಹತೆಗಳು:

ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳಲ್ಲಿ ಯಾವುದೇ ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ಆಡಿಟ್ ಆಫೀಸರ್ ಹುದ್ದೆಗೆ ಸಿಎ / ಎಂಬಿಎ / ಕಾಸ್ಟ್‌ ಅಂಡ್‌ ಮ್ಯಾನೇಜ್ಮೆಂಟ್ ಅಕೌಂಟಂಟ್‌ / ಮಾಸ್ಟರ್ ಇನ್ ಕಾಮರ್ಸ್‌ / ಮಾಸ್ಟರ್ ಇನ್ ಬ್ಯುಸಿನೆಸ್ ಸ್ಟಡೀಸ್‌ ಪಾಸ್‌ ಆದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  • ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‌ಸೈಟ್‌ https://ssc.gov.in/ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ‘Combined Graduate Level Examination,2024’ ಎಂದಿರುವ ಮುಂದೆ ‘Apply’ ಎಂದಿರುತ್ತದೆ. ಈ ಬಟನ್‌ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ‘New User? Register Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈಗಾಗಲೇ ರಿಜಿಸ್ಟ್ರೇಷನ್‌ ಪಡೆದವರು ನೇರವಾಗಿ ಲಾಗಿನ್ ಆಗುವ ಮೂಲಕ ಅರ್ಜಿ ಹಾಕಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ / ಚಲನ್‌ ಮೂಲಕ ಪಾವತಿಸಬಹುದು.
  • ಅಭ್ಯರ್ಥಿಗಳು ಅರ್ಜಿ ಪೂರ್ಣಗೊಂಡ ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಹುದ್ದೆಯನ್ನು ಅವಲಂಬಿಸಿ ವೇತನವು ಬದಲಾಗುತ್ತದೆ. ಗ್ರೂಪ್ ಎ ಹುದ್ದೆಗಳಿಗೆ ಆರಂಭಿಕ ವೇತನವು ತಿಂಗಳಿಗೆ 56,100 ರಿಂದ 1,77,500 ರೂ. ಗ್ರೂಪ್ ಬಿ ಹುದ್ದೆಗಳಿಗೆ ತಿಂಗಳಿಗೆ 35,400 ರಿಂದ 1,12,400 ರೂ. ಗ್ರೂಪ್ ಸಿ ಹುದ್ದೆಗಳಿಗೆ ತಿಂಗಳಿಗೆ 25,500 ರಿಂದ 81,100 ರೂಇದನ್ನು ಓದಿ -.ಮನೆಯ ಗೋಡೆ ಕುಸಿದು ನಾಲ್ವರ ದುರ್ಮರಣ

ವೆಬ್‌ಸೈಟ್‌ ವಿಳಾಸ https://ssc.nic.in/

ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ ದಿನಾಂಕ
  • 24 ಜೂನ್ 2024
  • ನೋಂದಣಿ ದಿನಾಂಕಗಳು
  • 24 ಜೂನ್ 2024
  • ಎಸ್‌ಎಸ್ಸಿ ಸಿಜಿಎಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • 24 ಜುಲೈ 2024
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ
  • 25 ಜುಲೈ 2024
  • ಎಸ್‌ಎಸ್ಸಿ ಸಿಜಿಎಲ್ ಟೈಯರ್ 1 ಪರೀಕ್ಷೆ ದಿನಾಂಕಗಳು
  • ಸೆಪ್ಟೆಂಬರ್-ಅಕ್ಟೋಬರ್ 2024
Team Newsnap
Leave a Comment

Recent Posts

ನಿರ್ಮಲಾ ಸೀತಾರಾಮನ್‌ ವಿರುದ್ಧ FIR ದಾಖಲು

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವರ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‌ ಪಡೆದ ಆರೋಪದ… Read More

September 28, 2024

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ವೇಳಾಪಟ್ಟಿ ಬಿಡುಗಡೆ

ಮೈಸೂರು: ಸರ್ಕಾರ ಹಾಗು ಜಿಲ್ಲಾಡಳಿತ ಮೈಸೂರು ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು , ಮೈಸೂರು ದಸರಾ-2024ರ ವೇಳಾಪಟ್ಟಿಯನ್ನು ಬಿಡುಗಡೆ… Read More

September 28, 2024

ಭಾರಿ ಅವಘಡ : ಟಾಟಾ ಫ್ಯಾಕ್ಟರಿಯಲ್ಲಿ ಬೆಂಕಿ

ಚೆನ್ನೈ: ತಮಿಳುನಡಿನ ಕೂತನಹಳ್ಳಿಯಲ್ಲಿ ಟಾಟಾ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿಯ… Read More

September 28, 2024

MLA ಮುನಿರತ್ನ ಮನೆ ಮೇಲೆ SIT ದಾಳಿ

ಬೆಂಗಳೂರು: ಇಂದು ಬೆಳಿಗ್ಗೆ ಬಿಜೆಪಿ MLA ಮುನಿರತ್ನ ಮನೆ ಮೇಲೆ SIT ದಾಳಿ ನಡೆಸಿದ್ದಾರೆ. ಅತ್ಯಾಚಾರ, ಜಾತಿ ನಿಂದನೆ ಹಾಗೂ… Read More

September 28, 2024

ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲು

ಮೈಸೂರು: . ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ನಂತರ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಮೈಸೂರಿನ… Read More

September 27, 2024

ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಬೆಂಗಳೂರು: ಬಿಬಿಎಂಪಿ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿಯ ಯಶವಂತಪುರ ಕಚೇರಿಯ ಎಆರ್ ಒ ಸೇರಿದಂತೆ… Read More

September 27, 2024