January 10, 2025

Newsnap Kannada

The World at your finger tips!

c t ravi

ಜೆಎನ್‌ಯು ಗೆ ಸ್ವಾಮಿ ವಿವೇಕಾನಂದ ವಿವಿ ಎಂದು ಹೆಸರು ಇಡಿ : ಸಿ.ಟಿ.ರವಿ

Spread the love

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲದ ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ್ದರು. ಪರ ವಿರೋಧದ ನಡುವೆ JNU ಕ್ಯಾಂಪಸ್‌ನಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣಗೊಂಡಿತ್ತು.

ಇದೀಗ ಜವಾಹರ್ ಲಾಲ್ ವಿಶ್ವ ವಿದ್ಯಾನಿಲಯವನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಟ್ವಿಟರ್ ಮೂಲರ ಸಿಟಿ ರವಿ ಇದೀಗ JNU ಮರು ನಾಮಕರಣದ ಬಾಂಬ್ ಸಿಡಿಸಿದ್ದಾರೆ.  ಸ್ವಾಮಿ ವಿವೇಕಾನಂದರು  ಭಾರತ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ವಿವೇಕಾನಂದರ ತತ್ವ, ಜೀವನ ಮೌಲ್ಯಗಳು ಭಾರತದ ಶಕ್ತಿಯಾಗಿದೆ. ಇದೀಗ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡುವುದು ಸರಿಯಾಗಿದೆ. ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಆದರ್ಶಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ JNU ಯುನಿವರ್ಸಿಟಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ ಬೆನ್ನಲ್ಲೇ ವಿಶ್ವವಿದ್ಯಾನಿಲಯ ಹೆಸರ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಇನ್ನು ಪ್ರತಿಮೆ ಅನಾವರಣಕ್ಕೂ ಪರ ವಿರೋಧಗಳು ಕೇಳಿ ಬಂದಿತ್ತು. ಕೇಂದ್ರ ಸರ್ಕಾರದ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದರೆ, ಕೆಲವರು ವಿರೋಧಿಸಿದ್ದರು.

ಗೋ ಬ್ಯಾಕ್ ಮೋದಿ ಎಂಬು ಘೋಷ ವಾಕ್ಯಗಳು ಮೊಳಗಿತ್ತು. ಇದೀಗ ಸಿ ಟಿ ರವಿ ಟ್ವಿಟರ್ ಪೋಸ್ಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ.  ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸಿ ಅದಕ್ಕೆ ಸ್ವಾಮಿ ವಿವೇಕಾನಂದರ ಹೆಸರಿಡಲು ಸಾಮಾಜಿಕ ಜಾಲತಾಣದಲ್ಲಿ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!